ಕರ್ನಾಟಕ

karnataka

ETV Bharat / bharat

ಕಾರ್ಯ ನಿರ್ವಹಿಸುತ್ತಲೇ ಹೃದಯಾಘಾತದಿಂದ ಸಾವನ್ನಪ್ಪಿದ ಡಿಜಿಪಿ ಪ್ರಣಬ್​! - ಹೃದಯಾಘಾತದಿಂದ ಪ್ರಣಬ್​ ನಂದಾ ಸಾವು

ರಾಷ್ಟ್ರ ರಾಜಧಾನಿ ನವದೆಹಲಿಗೆ ಭೇಟಿ ನೀಡಿದ್ದ ವೇಳೆ ಗೋವಾ ಡಿಜಿಪಿ ಪ್ರಣಬ್​ ನಂದಾ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಪ್ರಣಬ್​ ನಂದಾ

By

Published : Nov 16, 2019, 12:33 PM IST

ಪಣಜಿ: ಗೋವಾದಲ್ಲಿ ಡಿಜಿಪಿ ಆಗಿ ಸೇವೆ ಸಲ್ಲಿಸುತ್ತಿದ್ದ 57 ವರ್ಷದ ಪ್ರಣಬ್​ ನಂದಾ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಐಜಿಪಿ ಜಸ್ಟಾಲ್​ ಸಿಂಗ್​ ತಿಳಿಸಿದ್ದಾರೆ.

ಕೆಲಸದ ನಿಮಿತ್ತ ರಾಷ್ಟ್ರ ರಾಜಧಾನಿ ದೆಹಲಿಗೆ ಭೇಟಿ ನೀಡಿದ್ದ ಅವರು, ನಿನ್ನೆ ಸಂಜೆ ತೀವ್ರ ಎದೆನೋವಿನ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ತದನಂತರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
1988ರ ಬ್ಯಾಚ್​​ನ ಐಪಿಎಸ್ ಅಧಿಕಾರಿ ಪ್ರಣಬ್ ನಂದಾ ಅರುಣಾಚಲ ಪ್ರದೇಶ, ಮಿಜೋರಾಂ ಹಾಗೂ ಇತರ ಕೇಂದ್ರಾಡಳಿತ ಕೇಡರ್‌ಗೆ ಸೇರಿದ್ದಾರೆ. ಈ ವರ್ಷದ ಮಾರ್ಚ್​​ನಲ್ಲಿ ಗೋವಾ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಹುದ್ದೆಯನ್ನು ವಹಿಸಿಕೊಂಡಿದ್ದರು. ಪ್ರಣಬ್ ನಂದಾ ಅವರ ಪತ್ನಿ ಕೂಡ ಪಾಂಡಿಚೇರಿಯಲ್ಲಿ ಡಿಜಿಪಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ABOUT THE AUTHOR

...view details