ಪಣಜಿ(ಗೋವಾ): ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರಿಗೆ ಕೊರೊನಾ ತಗುಲಿದೆ. ಈ ವಿಷಯವನ್ನು ಅವರೇ ಖಚಿತಪಡಿಸಿದ್ದಾರೆ.
ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ಗೆ ವಕ್ಕರಿಸಿದ ಕೊರೊನಾ - Goa CM Pramod Sawant tests coronavirus positive
ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರಿಗೆ ಕೊರೊನಾ ಮಹಾಮಾರಿ ವಕ್ಕರಿಸಿದೆ. ಇಂದು ಟೆಸ್ಟ್ ಮಾಡಿಸಿದಾಗ ವರದಿ ಪಾಸಿಟಿವ್ ಬಂದಿದೆ.
ಗೋವಾ ಸಿಎಂ ಪ್ರಮೋದ್ ಸಾವಂತ್
ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳದೆಯೇ 47 ವರ್ಷದ ಸಿಎಂ ಸಾವಂತ್ ಅವರಿಗೆ ಸೋಂಕು ಇರುವುದು ದೃಢಪಟ್ಟಿದೆ. ಸದ್ಯ ಅವರು ಹೋಮ್ ಐಸೋಲೇಷನ್ನಲ್ಲಿ ಇರುವುದಾಗಿ ತಿಳಿಸಿದ್ದಾರೆ.
'ಕೊರೊನಾ ಪರೀಕ್ಷೆ ಮಾಡಿಸಿಕೊಂಡಾಗ ನನಗೆ ಸೋಂಕು ಇರುವುದು ದೃಢಪಟ್ಟಿದೆ. ಹಾಗಾಗಿ ಸ್ವಇಚ್ಛೆಯಿಂದ ಹೋಮ್ ಐಸೋಲೇಷನ್ನಲ್ಲಿರುವೆ. ಸದ್ಯಕ್ಕೆ ಮನೆಯಿಂದಲೇ ಸರ್ಕಾರದ ಕಾರ್ಯಗಳನ್ನು ನಿರ್ವಹಿಸುವೆ. ಶೀಘ್ರದಲ್ಲೇ ಗುಣಮುಖನಾಗಿ ಹೊರಬರುವೆ. ನನ್ನ ಸಂಪರ್ಕದಲ್ಲಿದ್ದವರೆಲ್ಲರೂ ಕೊರೊನಾ ಪರೀಕ್ಷೆ ಮಾಡಿಸಿಕೊಂಡು, ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ' ಸಾವಂತ್ ತಿಳಿಸಿದ್ದಾರೆ.