ಕರ್ನಾಟಕ

karnataka

ತಾಪಮಾನ ಏರಿಕೆಯಿಂದ ಭವಿಷ್ಯದಲ್ಲಿ ಹೆಚ್ಚಲಿದೆ ನೀರಿನ ಸಮಸ್ಯೆ: ಐಐಎಸ್​​ಸಿ

ವಿಶ್ವದಲ್ಲಿ ತಾಪಮಾನ ಏರಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗಲಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆ ತಿಳಿಸಿದೆ.

By

Published : Nov 11, 2020, 5:34 PM IST

Published : Nov 11, 2020, 5:34 PM IST

IISc research
ಐಐಎಸ್​​ಸಿ

ಬೆಂಗಳೂರು: ಜಾಗತಿಕವಾಗಿ ತಾಪಮಾನ ಏರಿಕೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ವಿಶ್ವದ ಅನೇಕ ಭಾಗಗಳಲ್ಲಿ ಜೀವಜಲದ ಸಮಸ್ಯೆ ಉಂಟಾಗಲಿದೆ ಎಂದು ಐಐಎಸ್​​ಸಿ (ಭಾರತೀಯ ವಿಜ್ಞಾನ ಸಂಸ್ಥೆ) ಯ ಅಧ್ಯಯನ ತಂಡ ತಿಳಿಸಿದೆ.

ಈ ಬಗ್ಗೆ ಅಧ್ಯಯನ ನಡೆಸಿರುವ ತಂಡ, ಹವಾಮಾನ ಬದಲಾವಣೆಯು, ಇಡೀ ಜೀವ ಸಂಕುಲಕ್ಕೆ ಅಪಾಯವನ್ನುಂಟು ಮಾಡುತ್ತವೆ. ಒಂದು ಪ್ರದೇಶದಲ್ಲಿ ಅಂತರ್ಜಲ ಪತ್ತೆ ಹಚ್ಚಬೇಕಾದರೆ, ಆ ಪ್ರದೇಶದ ನೈಸರ್ಗಿಕ ಸಂಪನ್ಮೂಲಗಳು ಪ್ರಮುಖ ಪಾತ್ರ ವಹಿಸುತ್ತವೆ. ಐಐಎಸ್​ಸಿ ಮತ್ತು ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾಲಯದ ಸಂಶೋಧಕರು 31 ಪ್ರದೇಶಗಳ ಅಧ್ಯಯನ ನಡೆಸಿದ್ದಾರೆ. ಇದರಲ್ಲಿ ಅಮೆಜಾನ್, ಗಂಗಾ, ಬ್ರಹ್ಮಪುತ್ರ, ಸಿಂಧೂ, ನೈಲ್, ಟೆಗ್ರಿಸ್, ಯಫ್ರಟಿಸ್, ಮೆಕಾಂಗ್ ಮತ್ತು ಮಿಸ್ಸಿಸ್ಸಿಪಿ ಸೇರಿವೆ. 23 ನದಿಗಳ ಪ್ರದೇಶದಲ್ಲಿ ಉಷ್ಣಾಂಶ ಹೆಚ್ಚಿದ್ದು, ಪುನರ್ಭರ್ತಿಯಾಗುವ ಸಾಧ್ಯತೆ ಕಡಿಮೆಯಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಜಲ ಮೂಲಗಳಲ್ಲಿ ನೀರು ಕಡಿಮೆಯಾದ ಕಾರಣ ಮರ, ಗಿಡಗಳ ಬೆಳವಣಿಗೆಯೂ ಕ್ಷೀಣಿಸಿದೆ. ಇದು ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗಿದೆ. ಸದ್ಯ 0.9 ಡಿಗ್ರಿ ಸೆಲ್ಸಿಯಸ್​​ನಷ್ಟು ತಾಪಮಾನ ಏರಿದ್ದು, ಈ ಶತಮಾನದ ಅಂತ್ಯದ ವೇಳೆಗೆ 3.5 ಡಿಗ್ರಿ ಸೆಲ್ಸಿಯಸ್​​ ಗೆ ಏರುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

ಈ ಸಂಶೋಧನೆಯನ್ನು ಪ್ರೊಫೆಸರ್ ಚಂದನ್ ಬ್ಯಾನರ್ಜಿ, ಪ್ರೊಫೆಸರ್ ಆಶಿಶ್ ಶರ್ಮಾ ಮತ್ತು ಪ್ರೊಫೆಸರ್ ನಾಗೇಶ್ ಕುಮಾರ್ ಮಾಡಿದ್ದಾರೆ.

ABOUT THE AUTHOR

...view details