ಕರ್ನಾಟಕ

karnataka

ETV Bharat / bharat

ಪ್ರಪಂಚದಾದ್ಯಂತ 8,61,45,979ಕ್ಕೂ ಹೆಚ್ಚು ಮಂದಿಗೆ ತಗುಲಿದ ಕೊರೊನಾ - ಕೊರೊನಾ ಸುದ್ದಿ

ಅಮೆರಿಕ ಕೊರೊನಾ ಮಹಾಮಾರಿಗೆ ಹೆಚ್ಚು ಹಾನಿಗೊಳಗಾದ ರಾಷ್ಟ್ರವಾಗಿದೆ. ಪ್ರಪಂಚದಾದ್ಯಂತ 8,61,45,979 ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಇದುವರೆಗೆ 18,61,559 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ.

ಪ್ರಪಂಚದಾದ್ಯಂತ ಕೊರೊನಾ
ಪ್ರಪಂಚದಾದ್ಯಂತ ಕೊರೊನಾ

By

Published : Jan 6, 2021, 4:23 PM IST

ಹೈದರಾಬಾದ್:ವಿಶ್ವದಾದ್ಯಂತ ಕೊರೊನಾ ಸೋಂಕು 8,61,45,979ಕ್ಕೂ ಹೆಚ್ಚು ಜನರಿಗೆ ತಗುಲಿದ್ದು, 18,61,559ಕ್ಕೂ ಹೆಚ್ಚು ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಈವರೆಗೆ 6,11,05,194ಕ್ಕೂ ಹೆಚ್ಚು ಜನರು ಗುಣಮುಖರಾಗಿದ್ದಾರೆ.

ಅಮೆರಿಕವು ಕೊರೊನಾ ಮಹಾಮಾರಿಯಿಂದ ಹೆಚ್ಚು ಹಾನಿಗೊಳಗಾದ ರಾಷ್ಟ್ರವಾಗಿದೆ. ಯುಎಸ್​​ನಲ್ಲಿ 2,13,53,051 ಕ್ಕಿಂತ ಹೆಚ್ಚು ಪ್ರಕರಣಗಳು ಪತ್ತೆಯಾಗಿದ್ದು, 3,62,123 ಕ್ಕಿಂತ ಹೆಚ್ಚು ಸೋಂಕಿತರು ಸಾವನ್ನಪ್ಪಿದ್ದಾರೆ.

ಗ್ಲೋಬಲ್​ ಕೋವಿಡ್​ ಟ್ರ್ಯಾಕರ್​

ಈ ಮಧ್ಯೆ ವುಹಾನ್ ನಗರದಲ್ಲಿ ಕೋವಿಡ್-19 ಕುರಿತು ತನಿಖೆ ನಡೆಸಲು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ತಂಡಕ್ಕೆ ಚೀನಾ ಪ್ರವೇಶ ನಿರಾಕರಿಸಿದೆ. ಇಬ್ಬರು ಸದಸ್ಯರು ಈಗಾಗಲೇ ಅಲ್ಲಿಗೆ ಹೊರಟಿದ್ದರು. ಇದರಲ್ಲಿ ಒಬ್ಬರು ಈಗ ಹಿಂದೆ ಸರಿದಿದ್ದಾರೆ. ಇದಕ್ಕೆ ವೀಸಾ ಅನುಮತಿಗಳ ಕೊರತೆ ಎಂದು ಡಬ್ಲ್ಯುಎಚ್‌ಒ ಹೇಳಿದೆ.

ಓದಿ:ನಿಲ್ಲದ ಕೋವಿಡ್​ ಅಲೆ: 63 ನೇ ವಾರ್ಷಿಕ ಗ್ರ್ಯಾಮಿ ಅವಾರ್ಡ್ ಪ್ರೋಗ್ರಾಂ ಮುಂದೂಡಿಕೆ

ಫೈಜರ್ ಮತ್ತು ಬಯೋಟೆಕ್ ಅಭಿವೃದ್ಧಿಪಡಿಸಿದ ಲಸಿಕೆಯನ್ನು ಆಸ್ಟ್ರೇಲಿಯಾ ಹತ್ತು ಮಿಲಿಯನ್ ಡೋಸ್‌ಗಳನ್ನು ಪಡೆದುಕೊಂಡಿದೆ. ಆಸ್ಟ್ರೇಲಿಯಾದಲ್ಲಿ ಮೊದಲು ಲಸಿಕೆಯನ್ನು ಮುಂಚೂಣಿ ಕಾರ್ಮಿಕರು ಮತ್ತು ವೃದ್ಧರಿಗೆ ಆದ್ಯತೆಯ ಮೇರೆಗೆ ನೀಡಲಾಗುತ್ತದೆ. COVID-19 ಲಸಿಕೆಯನ್ನು ಈಗ ತಿಂಗಳ ಕೊನೆಯಲ್ಲಿ ಬದಲಾಗಿ ಮಾರ್ಚ್ ಆರಂಭದಲ್ಲಿ ನೀಡಲಾಗುವುದು ಎಂದು ಆಸ್ಟ್ರೇಲಿಯಾದ ಆರೋಗ್ಯ ಸಚಿವರಾದ ಗ್ರೆಗ್ ಹಂಟ್​ ಹೇಳಿದ್ದಾರೆ.

ABOUT THE AUTHOR

...view details