ಕರ್ನಾಟಕ

karnataka

ETV Bharat / bharat

ವಿಶ್ವದಲ್ಲಿ 81ಲಕ್ಷದ ಗಡಿದಾಟಿದ ಸೋಂಕಿತರ ಸಂಖ್ಯೆ: 4.38 ಲಕ್ಷ ಮಂದಿ ಸಾವು - ಹೈದರಾಬಾದ್

ಕೊರೊನಾ ಪ್ರಕರಣಗಳು ಜಗತ್ತಿನೆಲ್ಲೆಡೆ ದಿನೇ ದಿನೆ ಹೆಚ್ಚಳವಾಗುತ್ತಿದೆ. ಸದ್ಯ ವಿಶ್ವದೆಲ್ಲೆಡೆ 81,08,666 ಮಂದಿಗೆ ಸೋಂಕು ತಗುಲಿದ್ದು, 4,38,596 ಮಂದಿ ಸಾವನ್ನಪ್ಪಿದ್ದಾರೆ. ಇನ್ನು 41,96,981 ಮಂದಿ ಗುಣಮುಖರಾಗಿದ್ದಾರೆ.

ವಿಶ್ವದಲ್ಲಿ 81ಲಕ್ಷ ಗಡಿದಾಟಿದ ಕೊರೊನಾ ಪ್ರಕರಣ
ವಿಶ್ವದಲ್ಲಿ 81ಲಕ್ಷ ಗಡಿದಾಟಿದ ಕೊರೊನಾ ಪ್ರಕರಣ

By

Published : Jun 16, 2020, 9:04 AM IST

ಹೈದರಾಬಾದ್​: ಕೊರೊನಾ ಪ್ರಕರಣಗಳು ಜಗತ್ತಿನೆಲ್ಲೆಡೆ ದಿನೇ ದಿನೆ ಹೆಚ್ಚಳವಾಗುತ್ತಿದೆ. ಸದ್ಯ ವಿಶ್ವದೆಲ್ಲೆಡೆ 81,08,666 ಮಂದಿಗೆ ಸೋಂಕು ತಗುಲಿದ್ದು, 4,38,596 ಮಂದಿ ಸಾವನ್ನಪ್ಪಿದ್ದಾರೆ. ಇನ್ನು 41,96,981 ಮಂದಿ ಗುಣಮುಖರಾಗಿದ್ದಾರೆ.

ಇನ್ನು ಮೆಕ್ಸಿಕೊದಲ್ಲಿ ಕೊರೊನಾ ತಾಂಡವವಾಡುತ್ತಿದ್ದರೂ ವ್ಯಾಪಾರ ವಹಿವಾಟು ನಡೆಸಲು ಅವಕಾಶ ಕಲ್ಪಿಸಲಾಗಿದೆ.

ವಿಶ್ವದಲ್ಲಿ 81ಲಕ್ಷ ಗಡಿದಾಟಿದ ಕೊರೊನಾ ಪ್ರಕರಣ

ಈ ಕುರಿತು ಫೆಡರಲ್ ಆರೋಗ್ಯ ಅಧಿಕಾರಿ ಹೇಳಿಕೆ ನೀಡಿದ್ದು, ಈ ರಾಷ್ಟ್ರದಲ್ಲಿ ಕೊರೊನಾ ಪ್ರಕರಣ ಸಂಖ್ಯೆಯಲ್ಲಿ ಇಳಿಕೆ ಕಂಡುಬರುತ್ತಿದೆ ಎಂಬುವುದಕ್ಕೆ ಯಾವುದೇ ಸ್ಪಷ್ಟ ಪುರಾವೆಗಳಿಲ್ಲ ಎಂದಿದ್ದಾರೆ. ಆದರೆ, ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಹೇಳಿರುವಂತೆ ಕೊರೊನಾ ವೈರಸ್​ನಿಂದ ಅತಿಯಾಗಿ ಪೆಟ್ಟು ತಿಂದ ಕೆಲ ಪ್ರದೇಶಗಳಲ್ಲಿ ಸ್ವಲ್ಪ ಮಟ್ಟಿಗೆ ಕೇಸ್​ಗಳು ಕಡಿಮೆಯಾಗಿವೆ ಎಂದು ಪ್ರತಿಪಾದಿಸಿದ್ದಾರೆ.

ಇನ್ನು ಅಮೆರಿಕಾದ ಒರೆಗಾನ್​ನಲ್ಲಿ ಕೊರೊನಾ ಪ್ರಕರಣಗಳು ಏರುತ್ತಲೇ ಇದ್ದು, ಸೋಮವಾರದಂದು 184 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇನ್ನು ದೇಶದಲ್ಲೂ ಕೊರೊನಾ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಲೇ ಇದ್ದು, 3.43 ಲಕ್ಷಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಳ ಕಂಡಿದೆ. ಸಾವಿನ ಸಂಖ್ಯೆ ಕೂಡ 10 ಸಾವಿರದ ಗಡಿಗೆ ಬಂದು ನಿಂತಿದೆ. ಇದು ಭಾರತದಲ್ಲಿ ಆತಂಕಕ್ಕೆ ಕಾರಣವಾಗಿದೆ.

ABOUT THE AUTHOR

...view details