ನವದೆಹಲಿ: ತೀವ್ರವಾಗಿ ಕೊರೊನಾ ಬಾಧೆಗೆ ಒಳಗಾಗದ ರೋಗಿಗಳ ಚಿಕಿತ್ಸೆಗಾಗಿ ಫ್ಯಾಬಿಫ್ಲೂ ಎಂಬ ಬ್ರಾಂಡ್ ಹೆಸರಿನಲ್ಲಿ ಆಂಟಿವೈರಲ್ ಔಷಧಿ ಫಾವಿಪಿರವಿರ್ ಬಿಡುಗಡೆ ಮಾಡಲಾಗಿದೆ ಎಂದು ಗ್ಲೆನ್ಮಾರ್ಕ್ ಫಾರ್ಮಾಸ್ಯುಟಿಕಲ್ಸ್ ತಿಳಿಸಿದೆ. ಮುಂಬೈ ಮೂಲದ ಔಷಧ ಸಂಸ್ಥೆಯು ಶುಕ್ರವಾರ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ)ದಿಂದ ಉತ್ಪಾದನೆ ಮತ್ತು ಮಾರುಕಟ್ಟೆ ಅನುಮೋದನೆ ಪಡೆದಿತ್ತು.
ಕೋವಿಡ್-19 ಚಿಕಿತ್ಸೆಗಾಗಿ ಫ್ಯಾಬಿಫ್ಲೂವಿ ಅನುಮೋದಿತ ಮೊದಲ ಔಷಧ ಇದಾಗಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. ಫ್ಯಾಬಿಫ್ಲೂನಂತಹ ಪರಿಣಾಮಕಾರಿ ಚಿಕಿತ್ಸೆಯ ಲಭ್ಯತೆಯು ಭಾರತದಲ್ಲಿನ ರೋಗಿಗಳಿಗೆ ಹೆಚ್ಚು ಅಗತ್ಯವಿರುವ ಮತ್ತು ಸಮಯೋಚಿತ ಚಿಕಿತ್ಸೆಯ ಆಯ್ಕೆ ನೀಡುತ್ತದೆ ಎಂದು ಕಂಪನಿ ಆಶಿಸಿದೆ. ಕ್ಲಿನಿಕಲ್ ಪ್ರಯೋಗಗಳ ಸಮಯದಲ್ಲಿ ಫ್ಯಾಬಿಫ್ಲೂ ಮಧ್ಯಮ ಬಾಧಿತ ಕೋವಿಡ್-19 ರೋಗಿಗಳಿಗೆ ಪರಿಣಾಮಕಾರಿಯಾಗಿದೆ ಎಂದು ಗ್ಲೆನ್ಮಾರ್ಕ್ ಫಾರ್ಮಾಸ್ಯುಟಿಕಲ್ಸ್ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಗ್ಲೆನ್ ಸಲ್ದಾನಾ ಹೇಳಿದರು.