ಕರ್ನಾಟಕ

karnataka

ETV Bharat / bharat

ಜ್ಯೋತಿರಾದಿತ್ಯ ಸಿಂಧಿಯಾ ಚೇತರಿಕೆ.. ಹರ್ಷ ವ್ಯಕ್ತಪಡಿಸಿದ ಶಿವರಾಜ್‌ ಸಿಂಗ್‌ ಚೌಹಾಣ್​ - ಜ್ಯೋತಿರಾದಿತ್ಯ ಸಿಂಧಿಯಾ

ಜೆ ಎಂ ಸಿಂಧಿಯಾ ಅವರು ಸಂಪೂರ್ಣವಾಗಿ ಚೇತರಿಸಿಕೊಂಡ ನಂತರ ಮನೆಗೆ ಮರಳಿದರು. ಇದು ಸಂತೋಷದ ವಿಷಯವಾಗಿದೆ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್​ ಸಂತಸ ವ್ಯಕ್ತಪಡಿಸಿದ್ದಾರೆ.

ಶಿವರಾಜ್ ಸಿಂಗ್ ಚೌಹಾಣ್​
ಶಿವರಾಜ್ ಸಿಂಗ್ ಚೌಹಾಣ್​

By

Published : Jun 16, 2020, 7:27 PM IST

ಭೋಪಾಲ್ (ಮಧ್ಯ ಪ್ರದೇಶ): ಬಿಜೆಪಿ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ಬಗ್ಗೆ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್​ ಸಂತಸ ವ್ಯಕ್ತಪಡಿಸಿದ್ದಾರೆ.

ಓದಿ:ಜ್ಯೋತಿರಾದಿತ್ಯ ಸಿಂಧಿಯಾಗೆ ಕೊರೊನಾ ಲಕ್ಷಣ ಪತ್ತೆ: ದೆಹಲಿ ಆಸ್ಪತ್ರೆಗೆ ದಾಖಲಾದ ಬಿಜೆಪಿ ನಾಯಕ

ದೇಶದ ಮತ್ತು ರಾಜ್ಯದ ಜನಪ್ರಿಯ ನಾಯಕ ಮತ್ತು ನನ್ನ ಕಿರಿಯ ಸಹೋದರ ಜೆ ಎಂ ಸಿಂಧಿಯಾ ಅವರು ಸಂಪೂರ್ಣವಾಗಿ ಚೇತರಿಸಿಕೊಂಡ ನಂತರ ಮನೆಗೆ ಮರಳಿದರು. ಇದು ಸಂತೋಷದ ವಿಷಯ. ಜ್ಯೋತಿರಾದಿತ್ಯ ಅವರ ತಾಯಿ ಶ್ರೀಮಂತ್ ರಾಜಮಾತಾ ಗ್ವಾಲಿಯರ್ ಅವರ ಆರೋಗ್ಯ ಶೀಘ್ರದಲ್ಲೇ ಸುಧಾರಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಸಿಂಧಿಯಾ ಮತ್ತು ಅವರ ತಾಯಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಅವರನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಈಗ ಗುಣಮುಖರಾದ ಸಿಂಧಿಯಾ ಮನೆಗೆ ಮರಳಿದ್ದಾರೆ.

ABOUT THE AUTHOR

...view details