ನವದೆಹಲಿ:ಸಾಮಾಜಿಕ ಜಾಲತಾಣಗಳಿಂದ ದೂರ ಇರುವ ಸುಳಿವು ನೀಡಿರುವ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಿಂದ ದೂರವಾಗಬೇಡಿ. ದ್ವೇಷಿಸುವುದನ್ನು ಬಿಟ್ಟುಬಿಡಿ ಎಂದು ರಾಹುಲ್ ಗಾಂಧಿ ತಿರುಗೇಟು ಕೊಟ್ಟಿದ್ದಾರೆ.
'ದ್ವೇಷ ತ್ಯಜಿಸಿ, ಜಾಲತಾಣವನ್ನಲ್ಲ' : ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ತಿರುಗೇಟು - ದ್ವೇಷವನ್ನು ತ್ಯಜಿಸಿ, ಜಾಲತಾಣವನ್ನಲ್ಲ
ಸೋಷಿಯಲ್ ಮೀಡಿಯಾದಿಂದ ಹೊರಬರುವ ಬಗ್ಗೆ ಯೋಚನೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿಗೆ ದ್ವೇಷವನ್ನು ತ್ಯಜಿಸಿ, ಜಾಲತಾಣವನ್ನಲ್ಲ ಎಂದು ರಾಹುಲ್ ಗಾಂಧಿ ತಿರುಗೇಟು ನೀಡಿದ್ದಾರೆ.
ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ಸಲಹೆ
ಈ ಭಾನುವಾರದಿಂದ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಂ, ಯೂಟ್ಯೂಬ್ ಬಳಸದಿರಲು ಚಿಂತನೆ ನಡೆಸಿರುವುದಾಗಿ ಮೋದಿ ಘೋಷಣೆ ಮಾಡಿದ ನಂತರ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದು, 'ದ್ವೇಷವನ್ನು ಬಿಟ್ಟುಬಿಡಿ, ಸಾಮಾಜಿಕ ಜಾಲತಾಣದ ಖಾತೆಗಳನ್ನಲ್ಲ' ಎಂದಿದ್ದಾರೆ.
Last Updated : Mar 2, 2020, 11:17 PM IST