ಕರ್ನಾಟಕ

karnataka

By

Published : Apr 4, 2020, 6:42 PM IST

ETV Bharat / bharat

ಕೊರೊನಾ ಹೋರಾಟಕ್ಕೆ ರಾಜ್ಯಗಳಿಗೆ ಹೆಚ್ಚಿನ ಹಣಕಾಸು ನೆರವು ನೀಡಿ: ಕೇಂದ್ರಕ್ಕೆ ಕಾಂಗ್ರೆಸ್​​ ಮನವಿ

ಕೊರೊನಾ ವೈರಸ್ ವಿರುದ್ಧದ ಹೋರಾಡಲು ಕೇಂದ್ರ ಸರ್ಕಾರ ಪ್ರತೀ ರಾಜ್ಯಕ್ಕೂ ಒಂದು ಲಕ್ಷ ಕೋಟಿ ರೂ. ಹಣ ಬಿಡುಗಡೆ ಮಾಡಬೇಕೆಂದು ಕಾಂಗ್ರೆಸ್​​ ವಕ್ತಾರೆ ಸುಪ್ರಿಯಾ ಶ್ರೀನಾಟೆ ಒತ್ತಾಯಿಸಿದ್ದಾರೆ.

Give more financial aid to states to help them deal with coronavirus outbreak: Cong to Centre
ಕೇಂದ್ರಕ್ಕೆ ಕಾಂಗ್ರೆಸ್​​ ಮನವಿ

ನವದೆಹಲಿ: ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಹೆಚ್ಚಿನ ಹಣಕಾಸು ಮತ್ತು ಸಂಪನ್ಮೂಲಗಳನ್ನು ಒದಗಿಸುವ ಮೂಲಕ ರಾಜ್ಯಗಳಿಗೆ ಹೆಚ್ಚಿನ ಸಹಕಾರ ನೀಡುವಂತೆ ಕಾಂಗ್ರೆಸ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.

ರಾಜ್ಯಗಳು ವೈರಸ್ ವಿರುದ್ಧ ಹೋರಾಡುವಲ್ಲಿ ಅತಿದೊಡ್ಡ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿವೆ. ಹೀಗಾಗಿ ತುರ್ತಾಗಿ COVID-19 ರ ವಿರುದ್ಧ ಹೋರಾಡಲು ಕೇಂದ್ರವು ರಾಜ್ಯಗಳಿಗೆ ನೀಡಬೇಕಾದ ಬಾಕಿ ಇರುವ 42 ಸಾವಿರ ಕೋಟಿ ಜಿಎಸ್​​ಟಿ ಹಣದ ಜೊತೆಗೆ ಪ್ರತೀ ರಾಜ್ಯಕ್ಕೂ ಒಂದು ಲಕ್ಷ ಕೋಟಿ ರೂ. ಹಣ ಬಿಡುಗಡೆ ಮಾಡಬೇಕೆಂದು ಸುಪ್ರಿಯಾ ಶ್ರೀನಾಟೆ ಆಗ್ರಹಿಸಿದ್ದಾರೆ.

ವಿಡಿಯೋ ಕಾನ್ಫೆರೆನ್ಸ್​ ಮೂಲ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊರೊನಾ ವೈರಸ್​ ವಿರುದ್ಧದ ಹೋರಾಟದಲ್ಲಿ ರಾಜ್ಯಗಳು ಮುಂಚೂಣಿಯಲ್ಲಿದ್ದು, ವೈರಸ್​ ನಿಯಂತ್ರಿಸುವಲ್ಲಿ ಸಾಕಷ್ಟು ಪರಿಣಾಮಕಾರಿ ನೀತಿಗಳನ್ನು ರೂಪಿಸುತ್ತಿವೆ ಎಂದು ತಿಳಿಸಿದ್ರು. ಈ ಮಾರಣಾಂತಿಕ ಕಾಯಿಲೆ ಕೊರೊನಾ ವಿರುದ್ಧ ಹೋರಾಡುವ ಕಾರ್ಯತಂತ್ರಗಳನ್ನು ರೂಪಿಸುವಾಗ ಕೇಂದ್ರವು ರಾಜ್ಯ ಸರ್ಕಾರಗಳನ್ನು ಸಹ ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಸುಪ್ರಿಯಾ ಶ್ರೀನಾಟೆ ಹೇಳಿದರು. ಈಗಾಗಲೇ ಈ ಬಗ್ಗೆ ಮಾತುಕತೆ ನಡೆದಿದೆ. ಇನ್ನೇನಿದ್ದರೂ ಕೇಂದ್ರವು ರಾಜ್ಯಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. ಯಾಕೆಂದರೆ ರಾಜ್ಯಗಳು ಸಮರ್ಥವಾಗಿದ್ದಾಗ ಮತ್ತು ಕೇಂದ್ರ ವಿಕೇಂದ್ರೀಕೃತಗೊಂಡಾಗ ಮಾತ್ರ ನಾವು ಮಹಾಮಾರಿ ಕೊರೊನಾ ವೈರಸ್ ವಿರುದ್ಧದ ಈ ಯುದ್ಧವನ್ನು ಗೆಲ್ಲಬಹುದು ಎಂದು ಅವರು ಹೇಳಿದ್ರು.

ABOUT THE AUTHOR

...view details