ರೀವಾ(ಮಧ್ಯಪ್ರದೇಶ):14 ವರ್ಷದ ಬಾಲಕಿವೋರ್ವಳ ಮೇಲೆ ನಾಲ್ವರು ಅಪ್ರಾಪ್ತರು ಸೇರಿ ಸಾಮೂಹಿಕ ಅತ್ಯಾಚಾರಗೈದಿರುವ ಘಟನೆ ಮಧ್ಯಪ್ರದೇಶದ ರೀವಾದಲ್ಲಿ ನಡೆದಿದೆ.
ಬಾಲಕಿ ಮೇಲೆ ನಾಲ್ವರು ಅಪ್ರಾಪ್ತರಿಂದ ಸಾಮೂಹಿಕ ಅತ್ಯಾಚಾರ - ಬಾಲಕಿ ಮೇಲೆ ನಾಲ್ವರು ಅಪ್ರಾಪ್ತರಿಂದ ರೇಪ್
ಬಾಲಕಿಯೋರ್ವಳ ಮೇಲೆ ನಾಲ್ವರು ಅಪ್ರಾಪ್ತರು ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.
ಮನೆಯಿಂದ ಹೊರಗಡೆ ಹೋಗಿದ್ದ ಬಾಲಕಿ ಜತೆ ತೆರಳಿದ್ದ 13ರಿಂದ 14 ವರ್ಷದೊಳಗಿನ ನಾಲ್ವರು ಬಾಲಕರು ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಶನಿವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲು ಮಾಡಿ ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಬಾಲಕಿಯನ್ನ ವೈದ್ಯಕೀಯ ತಪಾಸಣೆಗೊಳಪಡಿಸಿದಾಗ ಅತ್ಯಾಚಾರ ನಡೆದಿರುವುದು ತಿಳಿದು ಬಂದಿದ್ದು, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಬಾಲಕಿ ವಾಸವಾಗಿದ್ದ ಗ್ರಾಮದಲ್ಲೇ ಬಾಲಕರು ವಾಸವಾಗಿದ್ದು, ಬಾಲಕಿ ಜತೆ ಹೋಗಿ ಈ ಕೃತ್ಯವೆಸಗಿದ್ದಾರೆ ಎಂದು ವರದಿಯಾಗಿದೆ.