ಮುಂಬೈ:ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸುತ್ತಿರುವ ಬಾಲಕಿ ಆಸ್ಪತ್ರೆ ಬೆಡ್ನಿಂದಲೇ ಪರೀಕ್ಷೆ ಎದುರಿಸಿದ್ದು, ಶೇ.73.40 ಅಂಕ ಪಡೆದುಕೊಂಡಿದ್ದಾಳೆ.
ಆಸ್ಪತ್ರೆ ಬೆಡ್‌ನಿಂದ ಪರೀಕ್ಷೆ ಬರೆದ ಬಾಲಕಿಗೆ ಶೇ 73 ಅಂಕ: ಫಲಿತಾಂಶಕ್ಕೂ ಮುನ್ನವೇ ಕಣ್ಮುಚ್ಚಿದ ಬಾಲೆ! - ಕ್ಯಾನ್ಸರ್ ಪೀಡಿತ ವಿದ್ಯಾರ್ಥಿನಿ
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಬಾಲಕಿಯೋರ್ವಳು ಅಲ್ಲಿಂದಲೇ ಪರೀಕ್ಷೆ ಬರೆದು ಫಸ್ಟ್ ಕ್ಲಾಸ್ ಅಂಕಗಳೊಂದಿಗೆ ಪಾಸ್ ಆಗಿದ್ದಾಳೆ. ಕಷ್ಟ ಮೆಟ್ಟಿ ನಿಂತು ಪರೀಕ್ಷೆ ಬರೆದ ಆಕೆಗೆ ತನಗೆ ಫಸ್ಟ್ ಕ್ಲಾಸ್ ಅಂಕ ಬಂದಿರುವುದನ್ನು ನೋಡಿ ಖುಷಿಪಡುವ ಅವಕಾಶವನ್ನು ವಿಧಿ ಕಸಿದುಕೊಂಡಿತು.
ಬಾಂದ್ರಾ ಶಾಲೆಯಲ್ಲಿ ವಿದ್ಯಾರ್ಥಿಯಾಗಿದ್ದ ಮಲಿಕಾ ಅಲಿ ಕ್ಯಾನ್ಸರ್ನಿಂದಾಗಿ ಟಾಟಾ ಮೊಮೊರಿಯಲ್ ಆಸ್ಪತ್ರೆಗೆ ದಾಖಲಾಗಿದ್ದಳು. ಹೀಗಾಗಿ ಅಲ್ಲಿಂದಲೇ ಮಹಾರಾಷ್ಟ್ರದ ದ್ವಿತೀಯ ಪಿಯು ಪರೀಕ್ಷೆ ಬರೆದಿದ್ದಾಳೆ. ಇದಾದ ಬಳಿಕ ರೋಗ ಉಲ್ಭಣಗೊಂಡಿದ್ದರಿಂದ ಫಲಿತಾಂಶ ಪ್ರಕಟವಾಗುವುದಕ್ಕೂ ಮುನ್ನವೇ ಆಕೆ ಸಾವನ್ನಪ್ಪಿದ್ದಳು.
ಇಂದು ಪ್ರಕಟಗೊಂಡ ಫಲಿತಾಂಶದಲ್ಲಿ ಮಲಿಕಾ ಇಂಗ್ಲಿಷ್ ವಿಷಯದಲ್ಲಿ 83, ಮರಾಠಿ 67, ಹಿಂದಿ 80, ಗಣಿತ 56, ವಿಜ್ಞಾನ ಮತ್ತು ತಂತ್ರಜ್ಞಾನ 36 ಹಾಗೂ ಸಮಾಜ ವಿಜ್ಞಾನ ವಿಭಾಗದಲ್ಲಿ 81 ಅಂಕ ಪಡೆದುಕೊಂಡಿದ್ದಾಳೆ. 500 ಅಂಕಗಳ ಪೈಕಿ 367 ಅಂಕಗಳಿಕೆ ಮಾಡಿರುವ ಬಾಲಕಿ ಇದೀಗ ಫಸ್ಟ್ ಕ್ಲಾಸ್ನಲ್ಲಿ ಪಾಸ್ ಆಗಿದ್ದಾಳೆ.