ರಂಗಾರೆಡ್ಡಿ:ಲವರ್ ಜೊತೆ ಸೇರಿ ಬಾಲಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಂಗಾರೆಡ್ಡಿ ಜಿಲ್ಲೆಯ ಪೆದ್ದಎಲ್ಕಚರ್ಲದ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ರಾವಿರ್ಯಾಲ ಗ್ರಾಮದ ಮಲ್ಲೇಶ್ (21) ಮತ್ತು ಬಾಲಕಿ (17) ಇಬ್ಬರು ಪ್ರೀತಿಸುತ್ತಿದ್ದು, ಮದುವೆಯಾಗುವ ಕನಸು ಹೊತ್ತಿದ್ದರು. ಆದ್ರೆ ಬಾಲಕಿಯನ್ನು ಸಾಕಿ ಬೆಳೆಸಿರುವ ದೊಡ್ಡಮ್ಮ ಇವರ ಮದುವೆಗೆ ಒಪ್ಪಿಗೆ ನೀಡಲಿಲ್ಲ.
ಇವರ ಮದುವೆಗೆ ಹಿರಿಯರು ನಿರಾಕರಿಸಿದರಿಂದ ಬುಧವಾರ ಬೆಳಗ್ಗೆ ಇಬ್ಬರೂ ಮನೆಬಿಟ್ಟು ಓಡಿ ಹೋಗಿದ್ದರು. ಇದನ್ನರಿತ ಬಾಲಕಿ ದೊಡ್ಡಮ್ಮ ಪೊಲೀಸ್ ಠಾಣೆಯಲ್ಲಿ ಮಲ್ಲೇಶ್ ವಿರುದ್ಧ ದೂರು ದಾಖಲಿಸಿದ್ದರು.
ಈ ಪ್ರಕರಣದ ತನಿಖೆ ನಡೆಸುತ್ತಿರುವಾಗಲೇ ಪೊಲೀಸರಿಗೆ ಪೆದ್ದಎಲ್ಕಚರ್ಲದ ಅರಣ್ಯ ಪ್ರದೇಶದಲ್ಲಿ ಇವರಿಬ್ಬರು ನೇಣಿಗೆ ಶರಣಾಗಿರುವ ಮಾಹಿತಿ ಬಂದಿತ್ತು. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು.
ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.