ಕರ್ನಾಟಕ

karnataka

ETV Bharat / bharat

ತಂಗಿ ಮೇಲೆಯೇ ಎರಗಿದ ಅಣ್ಣ... 13 ವರ್ಷಕ್ಕೆ ತಾಯಿಯಾದ ಬಾಲಕಿ! - ಕೃಷ್ಣಾ ಜಿಲ್ಲಾ ಸುದ್ದಿ

ಅಣ್ಣನ ಲೈಂಗಿಕ ದಾಹಕ್ಕೆ ಸಹೋದರಿಯೇ ತುತ್ತಾಗಿದ್ದಾಳೆ. ಏನೂ ಅರಿಯದ ವಯಸ್ಸಿನಲ್ಲಿ ಆ ಬಾಲಕಿ ತಾಯಿಯಾಗಿದ್ದಾಳೆ. ಇಂತಹ ಅಸಹ್ಯ ಎನಿಸುವ ಘಟನೆ ಪಕ್ಕದ ರಾಜ್ಯ ಆಂಧ್ರಪ್ರದೇಶದಲ್ಲಿ ನಡೆದಿದೆ.

ಸಾಂದರ್ಭಿಕ ಚಿತ್ರ

By

Published : Nov 2, 2019, 2:21 PM IST

ಕೃಷ್ಣಾ:ಮಕ್ಕಳೊಂದಿಗೆ ಆಟವಾಡುವ ವಯಸ್ಸಿನಲ್ಲಿ ಬಾಲಕಿಯೊಬ್ಬಳು ತನ್ನ ಅಣ್ಣನಿಂದಲೇ ತಾಯಿಯಾಗಿರುವ ಘಟನೆ ಕೃಷ್ಣಾ ಜಿಲ್ಲೆಯ ಮಚಿಲಿಪಟ್ಟಣಂ ತಾಲೂಕಿನ ವ್ಯಾಪ್ತಿಯಲ್ಲಿ ನಡೆದಿದೆ.

ಏನೂ ಅರಿಯದ ಬಾಲಕಿಯ ಮೇಲೆ ತನ್ನ ದೊಡ್ಡಮ್ಮ ಮಗನೇ ನಿರಂತರ ಅತ್ಯಾಚಾರ ಎಸಗಿದ್ದಾನೆ. ಈ ಘಟನೆ ಮೂರು ತಿಂಗಳ ಹಿಂದೆ ಬೆಳಕಿಗೆ ಬಂದಿತ್ತು. ಅಷ್ಟೊತ್ತಿಗಾಗಲೇ ಬಾಲಕಿ ಆರು ತಿಂಗಳ ಗರ್ಭಿಣಿಯಾಗಿದ್ದಳು.

ಬಾಲಕಿಗೆ ಗರ್ಭಪಾತ ಮಾಡಲು ಅವಕಾಶ ಇಲ್ಲದರಿಂದ ಮತ್ತು ಆರು ತಿಂಗಳು ಗರ್ಭಿಣಿಯಾಗಿರುವುದರಿಂದ ಐಸಿಡಿಎಸ್​ ಸಂರಕ್ಷಣೆಯಲ್ಲಿ ಬಾಲಕಿಗೆ ಆಶ್ರಯ ನೀಡಲಾಗಿತ್ತು. ಬುಧವಾರ ರಾತ್ರಿ ಬಾಲಕಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಗುರವಾರ ಬೆಳಗ್ಗೆ ಹೆಣ್ಣು ಮಗುವಿಗೆ ಜನ್ಮ ನೀಡಿದಳು. ಇನ್ನು ಆರೋಪಿ ವಿರುದ್ಧ ಪೊಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ.

ABOUT THE AUTHOR

...view details