ಮುಂಬೈ:ಬೆಡ್ ರೂಂನಲ್ಲಿ ತನ್ನ ಪ್ರಿಯತಮನ ಜೊತೆ ಇರುವ ವೇಳೆ ತಾಯಿ ಮನೆಗೆ ಬಂದ ವಿಷಯ ತಿಳಿದ ಬಾಲಕಿ ಮೊದಲನೇ ಮಹಡಿಯ ಕಿಟಕಿಯಿಂದ ಕೆಳಗೆ ಜಿಗಿದಿರುವ ಘಟನೆ ಮುಂಬೈನ ಬೈಲ್ ಬಜಾರ್ನಲ್ಲಿ ನಡೆದಿದೆ.
ಬೆಡ್ ರೂಂನಲ್ಲಿ ಪ್ರಿಯಕರನ ಜತೆ ಹಾಯಾಗಿರುವಾಗಲೇ ತಾಯಿ ಬಂದಳು.. ಆಮೇಲೇನಾಯ್ತು.. - Mumbai love case
ಮನೆಯಲ್ಲಿ ಯಾರೂ ಇಲ್ಲವೆಂದು ಪ್ರಿಯತಮನೊಂದಿಗಿದ್ದಳು ಬಾಲಕಿ. ಆದರೆ, ಹೊರಗೆ ಹೋಗಿದ್ದ ತಾಯಿ ಯಾವಾಗ ಮರಳಿ ಮನೆಗೆ ಬಂದಳೋ.. ಆಗಲೇ ಬಾಲಕಿ ಓಡಿ ಹೋಗಲು ಮುಂದಾದಳು..
![ಬೆಡ್ ರೂಂನಲ್ಲಿ ಪ್ರಿಯಕರನ ಜತೆ ಹಾಯಾಗಿರುವಾಗಲೇ ತಾಯಿ ಬಂದಳು.. ಆಮೇಲೇನಾಯ್ತು.. Girl jumps from window](https://etvbharatimages.akamaized.net/etvbharat/prod-images/768-512-6339089-thumbnail-3x2-megha.jpg)
17 ವರ್ಷದ ಬಾಲಕಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ತನ್ನ ಪ್ರಿಯತಮನ ಜೊತೆ ಬೆಡ್ ರೂಂನಲ್ಲಿರುತ್ತಾಳೆ. ತನ್ನ ತಾಯಿ ಮನೆಗೆ ಬಂದಿದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆಯೇ ಗಾಬರಿಗೊಂಡ ಆಕೆ, ಪ್ರಿಯತಮನಿಗೆ ತಪ್ಪಿಸಿಕೊಂಡು ಓಡಿಹೋಗಲು ತಿಳಿಸಿ, ಕಿಟಕಿಯಿಂದ ಕೆಳಗೆ ಹಾರಿ ಬಿದ್ದಿದ್ದಾಳೆ. ಇದರಿಂದಾಗಿ ಬಾಲಕಿಯ ಎಡಗಾಲು ಮುರಿದಿದೆ. ಘಟನೆ ಬಳಿಕ ಕುಟುಂಬಸ್ಥರೊಂದಿಗೆ ಆಕೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ.
ಶುಕ್ರವಾರ ಮಧ್ಯಾಹ್ನ ಘಟನೆ ನಡೆದಿದೆ. ಹುಡುಗಿಯ ಕುಟುಂಬದವರು ದೂರು ನೀಡಿದ ಬಳಿಕ ಐಪಿಸಿ ಹಾಗೂ ಪೋಕ್ಸೋ ಕಾಯ್ದೆಯಡಿ ಬಾಲಕಿಯ ಪ್ರಿಯತಮನ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ವಿಬಿನಗರ ಠಾಣಾ ಪೊಲೀಸರು ತಿಳಿದ್ದಾರೆ.