ಥಾಣೆ(ಮಹಾರಾಷ್ಟ್ರ):ಭಾರತೀಯ ಹಬ್ಬಗಳಲ್ಲಿ ಸಿಹಿ ತಿನಿಸುಗಳಿಗೆ ವಿಶೇಷ ಸ್ಥಾನವಿದೆ. ಒಂದೊಂದು ಹಬ್ಬಗಳಲ್ಲಿ ಒಂದೊಂದು ಸಿಹಿ ತಿನಿಸುಗಳನ್ನ ಮಾಡಲಾಗುತ್ತದೆ. ಅದರಲ್ಲೂ ದೀಪಾವಳಿ ಅಂದ್ರೆ ಸಿಹಿ ತಿನಿಸುಗಳನ್ನ ಕೊಳ್ಳೋದಕ್ಕೆ ಜನರು ಅಂಗಡಿಗಳಿಗೆ ಮುಗಿ ಬೀಳುತ್ತಾರೆ.
ದೀಪಾವಳಿಗೆಂದೆ ಸಿದ್ದವಾಗಿದೆ ಗೋಲ್ಡ್ ಸ್ವೀಟ್.. 1 ಕಿ.ಲೋ ಬೆಲೆ ಎಷ್ಟು ಗೊತ್ತಾ? - ವಿಶೇಷವಾದ ಮಿಠಾಯಿ
ಮಹಾರಾಷ್ಟ್ರದ ಥಾಣೆಯಲ್ಲಿ ಒಂದು ಅಂಗಡಿಯಲ್ಲಿ ದೀಪಾವಳಿಗೆಂದೆ ವಿಶೇಷ ಮಿಠಾಯಿ ಸಿದ್ದಪಡಿಸಿದೆ. ವಿಐಪಿ ಮಿಠಾಯಿ ಎಂದು ಹೆಸರಿಡಲಾಗಿದ್ದು ಇದರ ಬೆಲೆ ಒಂದು ಕಿಲೋ ಗ್ರಾಂಗೆ 11 ಸಾವಿರ ರೂಪಾಯಿಗಳು.
ಮಹಾರಾಷ್ಟ್ರದ ಥಾಣೆಯ ಅಂಗಡಿಯೊಂದರಲ್ಲಿ ದೀಪಾವಳಿಗೆಂದೇ ವಿಶೇಷ ಮಿಠಾಯಿ ಸಿದ್ದಪಡಿಸಿದೆ. ವಿಐಪಿ ಮಿಠಾಯಿ ಎಂದು ಹೆಸರಿಡಲಾಗಿದ್ದು ಇದರ ಬೆಲೆ ಒಂದು ಕಿಲೋ ಗ್ರಾಂಗೆ 11 ಸಾವಿರ ರೂಪಾಯಿಗಳು. ಈ ಮಿಠಾಯಿ ವಿಶೇಷತೆ ಎಂದರೆ ಇದನ್ನ ಚಿನ್ನದ ಹಾಳೆಯಿಂದ ಸುತ್ತಿಡಲಾಗುತ್ತಿದೆ. ಹೀಗಾಗಿ ಅಷ್ಟೊಂದು ದುಬಾರಿ ಎಂದು ಮಾಲೀಕರು ಹೇಳಿದ್ದಾರೆ. ಹಣ್ಣು ಮತ್ತು ಇತರೆ ಪದಾರ್ಥಗಳನ್ನ ಬಳಸಿ ಮಿಠಾಯಿ ಸಿದ್ದಪಡಿಸಿದ್ದು, ವಿವಿಧ ಆಕಾರಗಳಲ್ಲಿ ಲಭ್ಯವಿದೆ.
ಈ ಮಿಠಾಯಿ ದುಬಾರಿ ಯಾರು ಕೊಳ್ಳೋದಿಲ್ಲ ಎಂದು ಭಾವಿಸಿದ್ರೆ ನಿಮ್ಮ ಊಹೆ ತಪ್ಪು. ಯಾಕಂದ್ರೆ, ಜನ 500 ಗ್ರಾಂ ನಷ್ಟಾದರೂ ಮಿಠಾಯಿ ಕೊಳ್ಳುತ್ತಿದ್ದಾರೆ. ಈವರೆಗೆ ಉತ್ತಮ ವ್ಯಾಪಾರವಾಗಿದೆ ಎಂದು ಮಾಲೀಕರು ಹೇಳಿದ್ದಾರೆ.