ಕರ್ನಾಟಕ

karnataka

ETV Bharat / bharat

ಬಾಹ್ಯಾಕಾಶ ಯೋಜನೆಗಾಗಿ ತಿರುವನಂತಪುರ ತಲುಪಿದ ದೈತ್ಯ ಯಂತ್ರ

ಬಾಹ್ಯಾಕಾಶ ಯೋಜನೆಗಾಗಿ ದೈತ್ಯ ಯಂತ್ರವಾದ ಏರೋಸ್ಪೇಸ್ ಹಾರಿಜಾಂಟಲ್​​ ಆಟೋಕ್ಲೇವ್ ಕೇರಳದ ತಿರುವನಂತಪುರಂಗೆ ತಲುಪಿದೆ.

ತಿರುವನಂತಪುರ ತಲುಪಿದ ದೈತ್ಯ ಯಂತ್ರ
ತಿರುವನಂತಪುರ ತಲುಪಿದ ದೈತ್ಯ ಯಂತ್ರ

By

Published : Jul 19, 2020, 6:29 PM IST

ತಿರುವನಂತಪುರಂ(ಕೇರಳ): ತಿರುವನಂತಪುರಂನ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ (ವಿಎಸ್‌ಎಸ್‌ಸಿ) ಬಾಹ್ಯಾಕಾಶ ಸಂಶೋಧನಾ ಯೋಜನೆಗಾಗಿ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಹೊತ್ತು ಮಹಾರಾಷ್ಟ್ರದಿಂದ ಕಳೆದ ವರ್ಷ ಹೊರಟಿದ್ದ ಟ್ರಕ್ ಭಾನುವಾರ ಇಲ್ಲಿಗೆ ಆಗಮಿಸಿದೆ.

ನಾವು ಮಹಾರಾಷ್ಟ್ರದಿಂದ ಜುಲೈ 8, 2019 ರಂದು ಪ್ರಯಾಣವನ್ನು ಪ್ರಾರಂಭಿಸಿದ್ದೆವು. ಒಂದು ವರ್ಷ ನಾಲ್ಕು ರಾಜ್ಯಗಳಲ್ಲಿ ಪ್ರಯಾಣಿಸಿದ ನಂತರ ನಾವು ತಿರುವನಂತಪುರಂ ತಲುಪಿದ್ದೇವೆ ಎಂದು ಸರಕುಗಳೊಂದಿಗೆ ಪ್ರಯಾಣಿಸುತ್ತಿದ್ದ ಸಿಬ್ಬಂದಿ ತಿಳಿಸಿದ್ದಾರೆ.

ಟ್ರಕ್ ತೂಕವಿಲ್ಲದ ವಸ್ತುಗಳನ್ನು ತಯಾರಿಸಲು ಬಳಸುವ ಏರೋಸ್ಪೇಸ್ ಹಾರಿಜಾಂಟಲ್​​ ಆಟೋಕ್ಲೇವ್​​ನನ್ನು ಹೊತ್ತು ತಂದಿದೆ. ಇದು ತಿರುವನಂತಪುರಂನ ವಿಎಸ್‌ಎಸ್‌ಸಿಗಾಗಿ ಒಂದು ವರ್ಷದ ಹಿಂದೆ ಮಹಾರಾಷ್ಟ್ರದಿಂದ ಹೊರಟಿತ್ತು.

ಅಂತಿಮವಾಗಿ, ದಿನಕ್ಕೆ 5 ಕಿಲೋಮೀಟರ್ ಚಲಿಸಿ, ನಾಲ್ಕು ರಾಜ್ಯಗಳ ಮೂಲಕ ಪ್ರಯಾಣಿಸಿದ ನಂತರ ಅದು ತಿರುವನಂತಪುರಂ ತಲುಪಿದೆ. ಟ್ರಕ್‌ನೊಂದಿಗೆ 32 ಸಿಬ್ಬಂದಿ ಇದ್ದಾರೆ. ದೈತ್ಯ ಯಂತ್ರವು ಸುಮಾರು 70 ಟನ್ ತೂಕವಿದೆ. ಕ್ರಮವಾಗಿ 7.5 ಮೀಟರ್, 6.65 ಮೀಟರ್ ಎತ್ತರ ಮತ್ತು ಅಗಲವನ್ನು ಹೊಂದಿದೆ. ಇದನ್ನು ನಾಸಿಕ್‌ನಲ್ಲಿ ತಯಾರಿಸಲಾಗಿದ್ದು, ಶೀಘ್ರದಲ್ಲೇ ಭಾರತದ ಬಾಹ್ಯಾಕಾಶ ಸಂಶೋಧನಾ ಯೋಜನೆಗೆ ನಿಯೋಜಿಸಲಾಗುವುದು.

ABOUT THE AUTHOR

...view details