ಕರ್ನಾಟಕ

karnataka

ETV Bharat / bharat

ಗುಲಾಮ್ ನಬಿ ಆಜಾದ್, ಕಪಿಲ್ ಸಿಬಲ್ ಕಾಂಗ್ರೆಸ್​ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಬೇಕು: ಕೇಂದ್ರ ಸಚಿವ

ಗುಲಾಮ್ ನಬಿ ಆಜಾದ್ ಮತ್ತು ಕಪಿಲ್ ಸಿಬಲ್ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಬೇಕು ಎಂದು ಕೇಂದ್ರ ಸಚಿವ ರಾಮದಾಸ್ ಅಠಾವಳೆ ಹೇಳಿದ್ದಾರೆ.

Ramdas Athawale
ರಾಮದಾಸ್ ಅಠಾವಳೆ

By

Published : Sep 2, 2020, 8:20 AM IST

ನವದೆಹಲಿ: ಕಾಂಗ್ರೆಸ್ ಹಿರಿಯ ನಾಯಕರಾದ ಗುಲಾಮ್ ನಬಿ ಆಜಾದ್ ಮತ್ತು ಕಪಿಲ್ ಸಿಬಲ್ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರಬೇಕು ಎಂದು ಕೇಂದ್ರ ಸಚಿವ ರಾಮದಾಸ್ ಅಠಾವಳೆ ಹೇಳಿದ್ದಾರೆ.

ಕೇಂದ್ರದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಮರಳುತ್ತಲೇ ಇರುತ್ತದೆ ಮತ್ತು ಹಿರಿಯ ಕಾಂಗ್ರೆಸ್ ನಾಯಕರಾದ ಸಿಬಲ್, ಆಜಾದ್ ಮತ್ತು ಇತರರು ಬಿಜೆಪಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿರುವುದರಿಂದ ಜ್ಯೋತಿರಾದಿತ್ಯ ಸಿಂಧಿಯಾ ಮಾಡಿದಂತೆಯೇ ಅವರು ತಮ್ಮ ರಾಜೀನಾಮೆ ಸಲ್ಲಿಸಿ ಬಿಜೆಪಿಗೆ ಸೇರಬೇಕು ಎಂದು ಅಠಾವಳೆ ಹೇಳಿದ್ದಾರೆ.

ಕಾಂಗ್ರೆಸ್ ಮುಖ್ಯಸ್ಥರ ಹುದ್ದೆಯ ಬಗ್ಗೆ ವಿವಾದವಿದೆ. ರಾಹುಲ್ ಗಾಂಧಿ ಅವರು ಸಿಬಲ್, ಆಜಾದ್ ಅವರನ್ನು ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಆದ್ದರಿಂದ ಸಿಬಲ್, ಗುಲಾಮ್ ನಬಿ ಆಜಾದ್ ಅವರು ಕಾಂಗ್ರೆಸ್​ಗೆ ರಾಜೀನಾಮೆ ನೀಡುವಂತೆ ನಾನು ವಿನಂತಿಸುತ್ತೇನೆ. ಅವರು ಕಾಂಗ್ರೆಸ್ ಪಕ್ಷವನ್ನು ವಿಸ್ತರಿಸಲು ಹಲವು ವರ್ಷ ಕಳೆದಿದ್ದಾರೆ. ಆದರೆ ಅವರು ಅಲ್ಲಿಂದ ನಿರ್ಗಮಿಸಬೇಕು ಮತ್ತು ಬಿಜೆಪಿಗೆ ಸೇರಿಕೊಳ್ಳಬೇಕು ಎಂದು ಅಠಾವಳೆ ಹೇಳಿದ್ದಾರೆ.

ಅವರು ಅಲ್ಲಿ ಅಗೌರವಕ್ಕೆ ಒಳಗಾಗುತ್ತಿದ್ದರೆ ಜ್ಯೋತಿರಾದಿತ್ಯ ಸಿಂಧಿಯಾ ಅವರಂತೆಯೇ ಹೊರಡಬೇಕು. ಸಚಿನ್ ಪೈಲಟ್ ಕೂಡ ಹಾಗೆ ಮಾಡಿದರು. ಆದರೆ ಅವರು ರಾಜಿ ಮಾಡಿಕೊಂಡರು. ಕಾಂಗ್ರೆಸ್ ಪಕ್ಷವನ್ನು ಬೆಳೆಸಿದವರನ್ನು ದೂಷಿಸುವುದು ರಾಹುಲ್ ಗಾಂಧಿ ಅವರ ತಪ್ಪು ಎಂದಿದ್ದಾರೆ.

ಅಲ್ಲದೆ ಬಿಜೆಪಿ ಇನ್ನೂ ಹಲವು ವರ್ಷ ಅಧಿಕಾರದಲ್ಲೇ ಉಳಿಯಲಿದೆ. ಮುಂದಿನ ಚುನಾವಣೆಯಲ್ಲಿ ಎನ್​ಡಿಎ ಮೈತ್ರಿಕೂಟ 350ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯ ಸಾಧಿಸಲಿದೆ ಎಂದಿದ್ದಾರೆ.

ABOUT THE AUTHOR

...view details