ಕರ್ನಾಟಕ

karnataka

ETV Bharat / bharat

ಇಂಟರ್​​​ನ್ಯಾಷನಲ್ ರಸಪ್ರಶ್ನೆ ಸ್ಪರ್ಧೆ: ಭಾರತದ 7ವರ್ಷದ ಬಾಲಕಿಗೆ ಎರಡನೇ ಸ್ಥಾನ

ಡಬ್ಲ್ಯುಡಬ್ಲ್ಯುಎಫ್ ನಡೆಸಿದ ವೈಲ್ಡ್ ವಿಸ್ಡಮ್ ಇಂಟರ್​​​ನ್ಯಾಷನಲ್ ರಸಪ್ರಶ್ನೆ ಸ್ಪರ್ಧೆಯಲ್ಲಿ ಉತ್ತರ ಪ್ರದೇಶದ ಗಾಜಿಯಾಬಾದ್​ ಬಾಲಕಿ ಎರಡನೇ ಸ್ಥಾನ ಗೆದ್ದುಕೊಂಡಿದ್ದಾಳೆ.

Ghaziabad's girl
ಸ್ವಸ್ತಿ ಶರ್ಮಾ

By

Published : Sep 3, 2020, 4:46 PM IST

ಗಾಜಿಯಾಬಾದ್ (ಉತ್ತರ ಪ್ರದೇಶ): ನಗರದ ಅಮಿಟಿ ಶಾಲೆಯಲ್ಲಿ 3ನೇ ತರಗತಿಯಲ್ಲಿ ಓದುತ್ತಿರುವ 7 ವರ್ಷದ ಬಾಲಕಿಯೋರ್ವಳು ಡಬ್ಲ್ಯುಡಬ್ಲ್ಯುಎಫ್ ನಡೆಸಿದ ವೈಲ್ಡ್ ವಿಸ್ಡಮ್ ಇಂಟರ್​​​ನ್ಯಾಷನಲ್ ರಸಪ್ರಶ್ನೆ ಸ್ಪರ್ಧೆ-2020 ರಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದಾಳೆ.

ಗಾಜಿಯಾಬಾದ್​​ನ ಇಂದಿರಾಪುರಂ ನಿವಾಸಿ ಸ್ವಸ್ತಿ ಶರ್ಮಾ, ವೈಲ್ಡ್ ವಿಸ್ಡಮ್ ಇಂಟರ್​​​ನ್ಯಾಷನಲ್ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿ ಎರಡನೇ ಸ್ಥಾನ ಗೆದ್ದುಕೊಂಡಿದ್ದಾಳೆ. ಈ ಸ್ಪರ್ಧೆಯಲ್ಲಿ ಆಗ್ನೇಯ ಏಷ್ಯಾ, ದಕ್ಷಿಣ ಅಮೆರಿಕಾ ದೇಶಗಳು ಮತ್ತು ಇಂಗ್ಲೆಂಡಿನ ವಿದ್ಯಾರ್ಥಿಗಳು ಸಹ ಭಾಗವಹಿಸಿದ್ದರು.

ಇನ್ನು ಈ ಸ್ಪರ್ಧೆಯಲ್ಲಿ ಗ್ರ್ಯಾಂಡ್ ಚೆಸ್ ಮಾಸ್ಟರ್ ವಿಶ್ವನಾಥನ್ ಆನಂದ್ ಅವರೊಂದಿಗೆ ಸಂವಹನ ನಡೆಸಲು ಸಹ ಸ್ವಸ್ತಿ ಶರ್ಮಾಗೆ ಅವಕಾಶ ದೊರೆತಿತ್ತು.

ಈ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿ ಎರಡನೇ ಸ್ಥಾನ ಗಳಿಸಿದ ಬಗ್ಗೆ ಅತೀವ ಸಂತಸ ವ್ಯಕ್ತಪಡಿಸಿದ ಸ್ವಸ್ತಿ, ಇಂತಹ ದೊಡ್ಡ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಹಾಗೂ ಗೆಲುವು ಸಾಧಿಸಿರುವುದು ನನ್ನ ಹೆತ್ತವರನ್ನು ಹೆಮ್ಮೆ ಪಡಿಸಿದಂತಾಗಿದೆ. ಇದು ನನಗೆ ಬಹಳ ಸಂತೋಷವನ್ನುಂಟು ಮಾಡಿದೆ ಎಂದಿದ್ದಾರೆ.

ಸೆಲೆಬ್ರಿಟಿಗಳೊಂದಿಗೆ ಸಂವಹನ ನಡೆಸಲು ಹಾಗೂ ಅಂತಹ ಅವಕಾಶವನ್ನು ಪಡೆದ ಮಕ್ಕಳು ಹೆಚ್ಚು ಆತ್ಮವಿಶ್ವಾಸವನ್ನು ಗಳಿಸುತ್ತಾರೆ. ಸ್ವಸ್ತಿಯನ್ನು ನಮ್ಮ ಮಗಳಾಗಿ ಪಡೆಯಲು ನಾವು ಅದೃಷ್ಟಶಾಲಿಗಳು, ಅವಳ ಸಾಧನೆ ಬಗ್ಗೆ ನಮಗೆ ಸಂತೋಷ ಹಾಗೂ ಹೆಮ್ಮೆಯಿದೆ ಎಂದು ಸ್ವಸ್ತಿ ಪೋಷಕರು ಹೇಳಿದ್ದಾರೆ.

ಸ್ವಸ್ತಿ ಮೊದಲಿನಿಂದಲೂ ಬುದ್ಧಿವಂತ ವಿದ್ಯಾರ್ಥಿನಿ, ಅವಳು ಯಾವಾಗಲೂ ಸಹ ಪೂರ್ಣ ಗಮನದಿಂದ ಅಧ್ಯಯನ ಮಾಡುತ್ತಾಳೆ ಹಾಗೂ ಆಕೆಗೆ ಸಾಮಾನ್ಯ ಜ್ಞಾನದಲ್ಲಿ ಆಸಕ್ತಿ ಇರುವ ಕಾರಣ ಈ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಜಯ ಗಳಿಸಲು ಸಾಧ್ಯವಾಯಿತು ಎಂದು ಆಕೆಯ ಶಾಲಾ ಶಿಕ್ಷಕಿಯೋರ್ವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details