ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ದೇಶದ್ರೋಹದ ಅಡಿ ಕಾನೂನು ಕ್ರಮ ಜರುಗಿಸುವ ಮೊದಲು, ಕೇಂದ್ರ ಅಥವಾ ರಾಜ್ಯ ಸರ್ಕಾರದ ಅನುಮತಿ ಪಡೆಯಲು ಅಂಧೇರಿಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಅರ್ಜಿದಾರರಿಗೆ ನಿರ್ದೇಶನ ನೀಡಿದೆ.
'ಕಂಗನಾ ವಿರುದ್ಧ ಕ್ರಮ ಜರುಗಿಸುವ ಮೊದಲು ಸರ್ಕಾರದ ಅನುಮತಿ ಪಡೆಯಿರಿ' - ಕಂಗನಾ ರಣಾವತ್ ವಿರುದ್ಧ ಕಾನೂನು ಕ್ರಮ
ಮಹಾರಾಷ್ಟ್ರ ಸರ್ಕಾರವನ್ನು ತಾಲಿಬಾನ್, ಮುಂಬೈಯನ್ನು ಪಿಒಕೆ ಮತ್ತು ನ್ಯಾಯಾಂಗವನ್ನು ಪಪ್ಪು ಸೇನಾ ಎಂದು ಕರೆದು ಕಂಗನಾ ಟ್ವೀಟ್ ಮಾಡಿದ್ದರು.
ಮಹಾರಾಷ್ಟ್ರ ಸರ್ಕಾರವನ್ನು ತಾಲಿಬಾನ್, ಮುಂಬೈಯನ್ನು ಪಿಒಕೆ ಮತ್ತು ನ್ಯಾಯಾಂಗವನ್ನು ಪಪ್ಪು ಸೇನಾ ಎಂದು ಕರೆದು ಕಂಗನಾ ಟ್ವೀಟ್ ಮಾಡಿದ್ದರು. ಈ ವಿಚಾರವಾಗಿ ಕಂಗನಾ ಭಾವನಾತ್ಮಕ ದ್ವೇಷವನ್ನು ಪ್ರಚೋದಿಸಿದ್ದಾರೆ ಎಂದು ಆರೋಪಿಸಿ, ವಕೀಲ ಕಾಶಿಫ್ ದೇಶಮುಖ್ ಅರ್ಜಿ ಸಲ್ಲಿಸಿದ್ದರು.
ವಕೀಲ ಕಾಶಿಫ್ ದೇಶಮುಖ್ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ಗಂಭೀರವಾಗಿ ವಿಚಾರಣೆ ಮಾಡುವಂತೆ ಕೋರಿದ್ದರು. ಈ ಹಿಂದೆ ಬಾಂದ್ರಾದಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು, ಕಂಗನಾ ವಿರುದ್ಧ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ದೇಶದ್ರೋಹ ಪ್ರಕರಣ ದಾಖಲಿಸುವಂತೆ ನಿರ್ದೇಶಿಸಿತ್ತು. ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಕಂಗನಾ ಮುಂಬೈ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.