ನವದೆಹಲಿ:2019ರ ಲೋಕಸಭೆ ಚುನಾವಣೆಯಲ್ಲಿ ಬಳಕೆಯಾದ ಅಥವಾ ಮುದ್ರಿತವಾದ ವಿವಿ ಪ್ಯಾಟ್ ಮತ ಚೀಟಿಗಳನ್ನು ಒಂದು ವರ್ಷದವರೆಗೂ ಉಳಿಸಿಕೊಳ್ಳಬೇಕು. ತದನಂತರ ಅವುಗಳನ್ನು ನಾಶಪಡಿಸಬಹುದು. ಆದರೆ, ನಾಲ್ಕು ತಿಂಗಳಲ್ಲೇ ಆ ಮತ ಚೀಟಿಗಳನ್ನು ನಾಶಪಡಿಸಲಾಗಿದೆ ಎಂದು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ಸುಪ್ರೀಂಕೋರ್ಟ್ಗೆ ಮಾಹಿತಿ ನೀಡಿದರು.
ಚುನಾವಣಾ ದತ್ತಾಂಶದಲ್ಲಿ ಆದ ಲೋಪ - ದೋಷಗಳ ಕುರಿತು ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ಸುಪ್ರೀಂಕೋರ್ಟ್ನಲ್ಲಿ ನಡೆಯಿತು. ಆರ್ಟಿಐ ಆಧಾರದ ಮೂಲಕ ಮಾಹಿತಿ ಪಡೆದುಕೊಂಡಿದ್ದೇನೆ ಎಂದು ಭೂಷಣ್ ನ್ಯಾಯಪೀಠದ ಗಮನಕ್ಕೆ ತಂದರು.