ಕರ್ನಾಟಕ

karnataka

ETV Bharat / bharat

ಭಾರತ-ಚೀನಾ ಗಡಿಯಲ್ಲಿ ಸೇನಾ ಮುಖ್ಯಸ್ಥ ಎಂ.ಎಂ. ನರವಣೆ ವೈಮಾನಿಕ ಸಮೀಕ್ಷೆ

ಭಾರತ-ಚೀನಾ ಗಡಿ ಪ್ರದೇಶದ 3 ದಿನಗಳ ಪ್ರವಾಸ ಕೈಗೊಂಡಿರುವ ಸೇನಾ ಮುಖ್ಯಸ್ಥ ಎಂ.ಎಂ. ನರವಣೆ ಇಂದು ಚಮೋಲಿ ಜಿಲ್ಲೆಯ ರಿಮ್‌ಖೀಮ್‌, ನಿತಿ ಹಾಗೂ ಲ್ಯಾಪ್ಟಾಲ್ ಗಡಿ ಪ್ರದೇಶದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ.

gen-naravane-conducts-aerial-survey-of-bops-in-ukhand
ಭಾರತ-ಚೀನಾ ಗಡಿಯಲ್ಲಿ ಸೇನಾ ಮುಖ್ಯಸ್ಥ ಎಂ ಎಂ ನರವಾನೆ ವೈಮಾನಿಕ ಸಮೀಕ್ಷೆ

By

Published : Nov 12, 2020, 7:42 PM IST

ಡೆಹ್ರಾಡೂನ್‌: ಉತ್ತರಾಖಂಡ್‌ ಪ್ರವಾಸದಲ್ಲಿರುವ ಸೇನಾ ಮುಖ್ಯಸ್ಥ ಜನರಲ್‌ ಎಂ.ಎಂ. ನರವಣೆ, ಪೂರ್ವ ಲಡಾಖ್‌ನ ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದ ಬೆನ್ನಲ್ಲೇ ಇಲ್ಲಿನ ಗಡಿಗೆ ಹೊಂದಿಕೊಂಡಿರುವ ಪ್ರದೇಶದಲ್ಲಿಂದು ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ.

ಚಮೋಲಿ ಜಿಲ್ಲೆಯ ರಿಮ್‌ಖೀಮ್‌, ನಿತಿ ಹಾಗೂ ಲ್ಯಾಪ್ಟಾಲ್ ಗಡಿಯಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ ಹಿರಿಯ ಸೇನಾಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ.

ನಿನ್ನೆಯಷ್ಟೇ ಜನರಲ್‌ ಎಂ.ಎಂ. ನರವಣೆ ಅವರು ಉತ್ತರಾಖಂಡ್‌ ಪ್ರವಾಸ ಆರಂಭಿಸಿದ್ದು, ಭಾರತ-ಚೀನಾ ಗಡಿಯಲ್ಲಿರುವ ಭಾರತದ ಕೊನೆಯ ಹಳ್ಳಿ ಮನಾಗೆ ಭೇಟಿ ನೀಡಿದ್ದರು. ಈ ಭಾಗದಲ್ಲಿ ಸೇನಾ ಸನ್ನದ್ಧತೆಯ ಕುರಿತು ಪರಿಶೀಲನೆ ನಡೆಸಿದ್ದಾರೆ. ಇದಾದ ಬಳಿಕ ಜೋಶಿಮಠದ ಮುಖ್ಯ ಕಚೇರಿಯಲ್ಲಿ ಆಗಮಿಸಿ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಕಳೆದ ರಾತ್ರಿ ಇಲ್ಲೇ ತಂಗಿದ್ದಾರೆ.

ಇಂದು ವೈಮಾನಿಕ ಸಮೀಕ್ಷೆ ಮುಗಿಸಿರುವ ಸೇನಾ ಮುಖ್ಯಸ್ಥರು ರಾತ್ರಿ ನೈನಿತಾಲ್‌ನಲ್ಲಿ ತಂಗಲಿದ್ದಾರೆ. ನಾಳೆ ಉತ್ತರ ಪ್ರದೇಶದ ಬರೇಲಿಗೆ ಹೋಗುವ ಮುನ್ನ ಪಿಥೋರಗಢ್​ಗೆ ಭೇಟಿ ನೀಡಲಿದ್ದಾರೆ. ಭಾರತ-ಚೀನಾ ಗಡಿಯಲ್ಲಿನ ಸೇನಿಕರಿಗೆ ನೈತಿಕ ಆತ್ಮಸ್ಥೈರ್ಯ ತುಂಬಲು ಈ ಪ್ರವಾಸ ಕೈಗೊಂಡಿದ್ದಾರೆ.

ABOUT THE AUTHOR

...view details