ಮುಂಬೈ:ಎರಡನೇ ಅವಧಿಗೆ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದರೂ ಜಿಡಿಪಿ ಬೆಳವಣಿಗೆಯು ಆಮೆಗತಿಯಲ್ಲಿ ಸಾಗಲಿದೆ ಎಂದು ಇತ್ತೀಚೆಗಿನ ವರದಿ ತಿಳಿಸಿದೆ.
2018-19ನೇ ವಿತ್ತೀಯ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ದೇಶದ ಆರ್ಥಿಕ ಪ್ರಗತಿ ಶೇ 5.9ರಿಂದ ಶೇ 6.ರಲ್ಲಿ ಮುಂದುವರಿಯಲಿದೆ. ಹೀಗಾಗಿ, ಒಟ್ಟಾರೆ ಆರ್ಥಿಕ ವರ್ಷದ ಜಿಡಿಪಿ ಪ್ರಗತಿಯು ಶೇ 7ಕ್ಕಿಂತ ಕಡಿಮೆ ಆಗಲಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ವರದಿ ತಿಳಿಸಿದೆ.