ಗಯಾ(ಬಿಹಾರ): ಶಿವ ಪರ್ವತದ ನಂದಿ ವಿಗ್ರಹವು ಭಕ್ತರು ನೀಡುವ ಹಾಲು ಮತ್ತು ನೀರನ್ನು ಕುಡಿಯುತ್ತಿದೆ ಎಂಬುದನ್ನ ಬಿಹಾರದ ಗಯಾದ ಜನ ಹೇಳಿಕೊಳ್ತಿದ್ದಾರೆ.
ನಂದಿ ವಿಗ್ರಹ ಹಾಲು-ನೀರು ಕುಡಿಯುತ್ತಂತೆ..! - ಶಿವನ ನಂದಿ ವಿಗ್ರಹ, ಬ್ರಹ್ಮ ದೇವ್ ದಾಸ್,ಗಯಾ, ಬಿಹಾರ
ಭಕ್ತರ ಭಕ್ತಿಗೆ ಎಂತಹ ಕಲ್ಲು ದೇವರಾದರೂ ಕರಗಿ ಒಲಿಯುತ್ತಿದ್ದನೆಂಬ ಕಥೆಯನ್ನು ಪುರಾಣದಲ್ಲಿ ಕೇಳಿದ್ದೇವೆ. ಆದರೆ, ಈ ಕಲಿಯುಗದಲ್ಲೂ ಅಂತಹ ಹೇಳಿಕೆಗೆ ಹತ್ತಿರವಾಗಿ ಭಕ್ತರು ನೀಡೋ ಹಾಲು-ನೀರನ್ನು ಶಿವನ ನಂದಿ ವಿಗ್ರಹವೊಂದು ಕುಡಿಯುತ್ತಿದೆ ಎಂಬ ಮಾತನ್ನು ಗಯಾದ ಜನರು ಹೇಳಿಕೊಂಡಿದ್ದಾರೆ.
ಮಹಿಳೆಯೊಬ್ಬರು ನಂದಿಯು ಹಾಲನ್ನು ಕುಡಿಯುತ್ತಿದೆ ಎಂದು ಹೇಳಿಕೊಂಡ ನಂತರ ಇಲ್ಲಿನ ಸ್ಥಳೀಯರು ವಿಗ್ರಹಕ್ಕೆ ಹಾಲು-ನೀರನ್ನು ಅರ್ಪಿಸುತ್ತಿದ್ದಾರೆ. ಶ್ರಾವಣ ಮಾಸದ ಪವಿತ್ರ ತಿಂಗಳಿನಲ್ಲಿ ನಂದಿ ವಿಗ್ರಹವು ಹಾಲು ಹಾಗೂ ನೀರನ್ನು ಕುಡಿಯುತ್ತಿರುವುದು ಸತ್ಯ ಎಂದು ಸ್ಥಳೀಯರಾದ ಸುಮಿತ್ ಕುಮಾರ್ ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ದೇವಾಲಯದ ಅರ್ಚಕರಾದ ಬ್ರಹ್ಮ ದೇವ್ ದಾಸ್, ನಂದಿ ವಿಗ್ರಹ ಈವರೆಗೂ ಒಂದು ಹನಿ ನೀರನ್ನೂ ಸೇವಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಲಖನೌದ ದೇವಾಲಯವೊಂದರಲ್ಲಿ ಇದೇ ರೀತಿ ನಂದಿ ವಿಗ್ರಹವೊಂದು ನೀರು ಕುಡಿಯುತ್ತೆ ಅಂತಾ ಹೇಳಲಾಗಿತ್ತು. ಆದರೆ, ಅದನ್ನು ದೇವಾಲಯದ ಅರ್ಚಕರು ತಿರಸ್ಕರಿಸಿದ್ದರು.