ದುಬೈ: ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ನಿನ್ನೆ ಪಂಜಾಬ್ ತಂಡದ ವಿರುದ್ಧ ವಿರಾಟ್ ಕೊಹ್ಲಿ ನೇತೃತ್ವದ ಆರ್ಸಿಬಿ ಹೀನಾಯ ಸೋಲು ಕಂಡಿದೆ. ಈ ವೇಳೆ ವೀಕ್ಷಕ ವಿವರಣೆ ನೀಡ್ತಿದ್ದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ನೀಡಿರುವ ಹೇಳಿಕೆವೊಂದು ವಿವಾದ ರೂಪ ಪಡೆದುಕೊಂಡಿದೆ.
ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಕ್ಷೇತ್ರ ರಕ್ಷಣೆ ವೇಳೆ ಕೆ.ಎಲ್ ರಾಹುಲ್ ಅವರ ಕ್ಯಾಚ್ನ್ನ ಎರಡು ಸಲ ಕೈಚೆಲ್ಲಿದ್ದರು. ಇನ್ನು ಬ್ಯಾಟಿಂಗ್ ನಡೆಸಲು ಬಂದಿದ್ದ ವೇಳೆ ಕೇವಲ 1ರನ್ಗಳಿಕೆ ಮಾಡಿ ಪೆವಿಲಿಯನ್ ಸೇರಿಕೊಂಡಿದ್ದರು.
ರಾಯಲ್ ಚಾಲೆಂಜರ್ಸ್-ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಪಂದ್ಯದ ವೇಳೆ ವೀಕ್ಷಕ ವಿವರಣೆ ನೀಡುತ್ತಿದ್ದ ಸುನಿಲ್ ಗವಾಸ್ಕರ್ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ವಿಚಾರವಾಗಿ ಅಸಭ್ಯವಾಗಿ ಮಾತನಾಡಿದ್ದಾರೆ ಎಂಬ ಮಾತು ಗಂಭೀರವಾಗಿ ಕೇಳಿ ಬರುತ್ತಿದ್ದು,ಅದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಅನುಷ್ಕಾ ತಿರುಗೇಟು!
ಪಂದ್ಯ ವೀಕ್ಷಣೆ ಮಾಡ್ತಿರುವ ಅನುಷ್ಕಾ
ಸುನಿಲ್ ಗವಾಸ್ಕರ್ ಹೇಳಿಕೆಗೆ ಇದೀಗ ಖುದ್ದಾಗಿ ಅನುಷ್ಕಾ ಶರ್ಮಾ ತಿರುಗೇಟು ನೀಡಿದ್ದಾರೆ. ಮಿ. ಗವಾಸ್ಕರ್, ನಿಮ್ಮ ಸಂದೇಶವು ಅಸಹ್ಯಕರವಾಗಿದೆ. ಆದರೆ ಪತಿಯ ಆಟದ ಬಗ್ಗೆ ಆರೋಪ ಮಾಡುವಾಗ ಹೆಂಡತಿ ಮೇಲೆ ಇಂತಹ ವ್ಯಾಪಕ ಹೇಳಿಕೆ ನೀಡಲು ಯಾಕೆ ಯೋಚಿಸಿದ್ದೀರಿ ಎಂದು ವಿವರಿಸಿ. ನೀವು ಪ್ರತಿ ಕ್ರಿಕೆಟಿಗನ ಖಾಸಗಿ ಜೀವನ ಗೌರವಿಸಿದ್ದೀರಿ ಎಂದು ನನಗೆ ನಂಬಿಕೆಯಿದೆ. ನನ್ನ ಮತ್ತು ನನ್ನ ಗಂಡನ ಕುರಿತು ಅದೇ ಗೌರವ ನೀಡಬೇಕು ಎಂದು ನೀವು ಯೋಚಿಸುವುದಿಲ್ಲವೇ?
ಕಳೆದ ರಾತ್ರಿ ನನ್ನ ಗಂಡನ ಪ್ರದರ್ಶನದ ಬಗ್ಗೆ ಪ್ರತಿಕ್ರಿಯಿಸಲು ನಿಮ್ಮ ಮನಸ್ಸಿನಲ್ಲಿ ಹಲವು ಪದಗಳು ಮತ್ತು ವಾಕ್ಯಗಳು ಇವೆ ಎಂದು ನನಗೆ ಖಾತ್ರಿಯಿದೆ. ಆದರೆ, ಇದರಲ್ಲಿ ನನ್ನ ಹೆಸರು ಬಳಸಿದರೆ ಮಾತ್ರ ನಿಮ್ಮ ಮಾತು ಪ್ರಸ್ತುತವಾಗಿರುತ್ತದೆಯೇ? ಎಂದು ಪ್ರಶ್ನೆ ಮಾಡಿದ್ದಾರೆ. ಇವರ ಹೇಳಿಕೆಗೆ ಎಲ್ಲೆಡೆಯಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಕಾಮೆಂಟರಿ ಪ್ಯಾನಲ್ನಿಂದ ತಕ್ಷಣವೇ ತೆಗೆದು ಹಾಕಬೇಕು ಎಂಬ ಕೂಗು ಸಹ ಕೇಳಿ ಬರುತ್ತಿದೆ.
ಮೈದಾನದಲ್ಲಿ ವಿರಾಟ್ ಕೊಹ್ಲಿ