ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಿತಿಮೀರುತ್ತಿರುವ ವಾಯುಮಾಲಿನ್ಯದ ಬಗ್ಗೆ ಕರೆಯಲಾಗಿದ್ದ ಸಂಸದರ ಸಭೆಗೆ ಇಪ್ಪತ್ತಕ್ಕೂ ಅಧಿಕ ಸಂಸದರು ಗೈರಾಗಿದ್ದಾರೆ.
ದೆಹಲಿ ವಾಯುಮಾಲಿನ್ಯ ನಿಯಂತ್ರಣದ ಬಗ್ಗೆ ಚರ್ಚಿಸಲು ಸಂಸದರ ಉನ್ನತ ಮಟ್ಟದ ಸಭೆಯನ್ನು ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ಕರೆದಿದ್ದರು. ಪಟ್ಟಿಯಲ್ಲಿದ್ದ 29 ಸಂಸದರ ಪೈಕಿ ಕೇವಲ ನಾಲ್ವರು ಸಂಸದರು ಮಾತ್ರವೇ ಸಭೆಯಲ್ಲಿ ಹಾಜರಿದ್ದರು.
ಎಂಪಿಗಳು ಗೈರಾಗಿರುವ ಬಗ್ಗೆ ಸಭೆಯಲ್ಲಿ ಆಕ್ರೋಶ ವ್ಯಕ್ತವಾಗಿದೆ. ದೇಶದ ರಾಜಧಾನಿಯ ವಿಚಾರದಲ್ಲಿ ಚುನಾಯಿತ ಪ್ರತಿನಿಧಿಗಳ ಬೇಜವಾಬ್ದಾರಿ ನಡೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಚರ್ಚೆ ನಡೆಯುತ್ತಿದೆ. ಸಂಸದರ ಈ ಗೈರಿನ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಜಾವ್ಡೇಕರ್ ಹೇಳಿದ್ದಾರೆ.