ಔರಂಗಾಬಾದ್(ಮಹಾರಾಷ್ಟ್ರ): ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಎಸ್ಐಟಿ ಪೊಲೀಸರು ಬಂಧಿಸಿರುವ ಜಾರ್ಖಂಡ್ ಮೂಲದ ರಿಷಿಕೇಶ್ ಧನ್ಬಾದ್ ಎರಡು ವರ್ಷಗಳ ಕಾಲ ಮಹಾರಾಷ್ಟ್ರದಲ್ಲಿ ವಾಸವಾಗಿದ್ದ ಎಂದು ತಿಳಿದುಬಂದಿದೆ.
ಶಿಕ್ಷಕ, ಪತಂಜಲಿ ಅಂಗಡಿ ಮಾಲೀಕ: ಗೌರಿ ಲಂಕೇಶ್ ಹತ್ಯೆ ಆರೋಪಿಗಿದೆಯಂತೆ 'ಮಹಾ' ಲಿಂಕ್ - ಗೌರಿ ಹತ್ಯೆ ಪ್ರಕರಣ ಮತ್ತೊಬ್ಬ ಆರೋಪಿ ಬಂಧನ
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಪೊಲೀಸರಿಂದ ಬಂಧಿಸಲ್ಪಟ್ಟ ಜಾರ್ಖಂಡ್ ಮೂಲದ ಆರೋಪಿ ಹೃಷಿಕೇಶ್ ದೇವಾಡಿಕರ್ ಮಹಾರಾಷ್ಟ್ರದಲ್ಲಿ ಪತಂಜಲಿ ಅಂಗಡಿ ನಡೆಸುತ್ತಿದ್ದ ಎಂದು ತಿಳಿದುಬಂದಿದೆ.
ಗೌರಿ ಲಂಕೇಶ್ ಹತ್ಯೆ ಆರೋಪಿ
ಆರೋಪಿ ಹೃಷಿಕೇಶ್ ದೇವಾಡಿಕರ್ 2014 ರಿಂದ 2016 ವರಗೆ ಪತ್ನಿ ಮತ್ತು ಪೋಷಕರೊಂದಿಗೆ ಮಹಾರಾಷ್ಟ್ರದ ಔರಂಗಾಬಾದ್ನ ನಿವಾಸಿ ಯಶವಂತ್ ಶುಕ್ಲಾ ಎಂಬುವವರ ಮನೆಯೊಂದರಲ್ಲಿ ಬಾಡಿಗೆಗೆ ವಾಸವಾಗಿದ್ದ. ಅಲ್ಲದೆ ಇದೇ ಪ್ರದೇಶದಲ್ಲಿ ಪತಂಜಲಿ ಅಂಗಡಿಯೊಂದನ್ನು ನಿರ್ವಹಿಸುತ್ತಿದ್ದ ಎಂದು ತಿಳಿದುಬಂದಿದೆ.
ತನ್ನ ಪತಂಜಲಿ ಅಂಗಡಿಯನ್ನು ಮಾರಾಟ ಮಾಡಿದ ಹೃಷಿಕೇಶ್ ಸೋಲಾಪುರಲ್ಲಿ 8 ರಿಂದ 10ನೇ ತರಗತಿಯ ಮಕ್ಕಳಿಗೆ ಪಾಠ ಹೇಳಲು ತೆರಳುತ್ತಿದ್ದ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.