ಉಸ್ಮಾನಾಬಾದ್:ತುಜಾಪುರ-ಸೋಲಾಪುರ ರಾಷ್ಟ್ರೀಯ ಹೆದ್ದಾರಿ ತಮಲವಾಡಿಯಲ್ಲಿ ಸಿಲಿಂಡರ್ ತುಂಬಿದ್ದ ಲಾರಿ ಸ್ಫೋಟಗೊಂಡಿರುವ ಘಟನೆ ತಡರಾತ್ರಿ ನಡೆದಿದೆ.
ಸಿಲಿಂಡರ್ ತುಂಬಿದ್ದ ಲಾರಿ ಸ್ಫೋಟ, ಬೆಂಕಿ ನಂದಿಸಿದ ಅಗ್ನಿಶಾಮಕ ದಳ - ಸ್ಥಳಕ್ಕೆ ಸೋಲಾಪುರ ಅಗ್ನಿಶಾಮಕ ದಳದ ಸಿಬ್ಬಂದಿ
ತುಜಾಪುರ - ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ತಮಲವಾಡಿ ಬಳಿ ಸಂಚರಿಸುತ್ತಿದ್ದ ಗ್ಯಾಸ್ ಟ್ಯಾಂಕರ್ ಸ್ಫೋಟಗೊಂಡಿರುವ ಘಟನೆ ತಡರಾತ್ರಿ ನಡೆದಿದೆ.
ಚಲಿಸುತ್ತಿದ್ದ ಸಿಲಿಂಡರ್ ತುಂಬಿದ್ದ ಲಾರಿ ಸ್ಫೋಟ, ಬೆಂಕಿ ನಂದಿಸಿದ ಅಗ್ನಿಶಾಮಕ ದಳ
ಹೆಚ್ಪಿ ಕಂಪನಿಯ ಸಿಲಿಂಡರ್ ತುಂಬಿದ್ದ ಲಾರಿಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಹತ್ತಿಕೊಂಡಿದ್ದು, ಘಟನೆ ತೀವ್ರತೆಗೆ ಉಳಿದ ಸಿಲಿಂಡರ್ಗಳು ಸ್ಫೋಟಗೊಂಡಿವೆ. ಸ್ಫೋಟದ ತೀವ್ರತೆಯ ಸದ್ದು 15ಕಿಮೀ ವರೆಗಿನ ಸುತ್ತಮುತ್ತ ಗ್ರಾಮಗಳಿಗೆ ಕೇಳಿಸಿದ್ದು, ಇದರಿಂದ ಜನರು ಭಯಭೀತರಾಗಿದ್ದಾರೆ. ಸ್ಥಳಕ್ಕೆ ಸೋಲಾಪುರ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದು, ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ವರದಿಯಾಗಿದೆ.