ನವದೆಹಲಿ : ವಿಶಾಖಪಟ್ಟಣಂ ಅನಿಲ ದುರಂತದ ಬಗ್ಗೆ ಎನ್ಡಿಆರ್ಎಫ್ ಮುಖ್ಯಸ್ಥರು ಸ್ಪಷ್ಟನೆ ನೀಡಿದ್ದಾರೆ. ಲಾಕ್ಡೌನ್ನಿಂದಾಗಿ ಮುಚ್ಚಲಾಗಿದ್ದ ಈ ಪ್ಲಾಸ್ಟಿಕ್ ಕಾರ್ಖಾನೆಯಲ್ಲಿ ಕಾರ್ಯಾಚರಣೆ ಪುನರಾರಂಭಕ್ಕೆ ಸಿದ್ಧತೆ ನಡೆಸಿದ್ದರಿಂದ ಈ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.
ಕಾರ್ಖಾನೆಯಲ್ಲಿದ್ದ ಸ್ಥಾವರವನ್ನು ಮತ್ತೆ ತೆರೆದಿದ್ದೇ ದುರಂತಕ್ಕೆ ಕಾರಣ.. ಎನ್ಡಿಆರ್ಎಫ್ ಚೀಫ್
ಇದು ನರಮಂಡಲ, ಗಂಟಲು, ಚರ್ಮ, ಕಣ್ಣುಗಳು ಮತ್ತು ದೇಹದ ಕೆಲವು ಭಾಗಗಳ ಮೇಲೆ ಪರಿಣಾಮ ಬೀರುವ ಸ್ಟೈರೀನ್ ಅನಿಲ. ಹಾಗಾಗಿ ನೂರಾರು ಜನ ಅಸ್ವಸ್ಥರಾಗಿದ್ದಾರೆ.
ಲಾಕ್ಡೌನ್ನಿಂದಾಗಿ ಸ್ಥಾವರವನ್ನು ಮುಚ್ಚಾಲಾಗಿತ್ತು. ಈಗ ಮತ್ತೆ ಸ್ಥಾವರದ ಕಾರ್ಯಾಚರಣೆಗೆ ಸಿದ್ಧತೆ ನಡೆಸಲಾಗುತ್ತಿತ್ತು. ಈ ವೇಳೆ ಅನಿಲ ಸೋರಿಕೆಯಾಗಿದೆ. ಮುಂಜಾನೆ 2: 30ರ ಸುಮಾರಿಗೆ ಈ ಪ್ರದೇಶದಲ್ಲಿ ಸ್ಟೈರೀನ್ ಅನಿಲ ಸೋರಿಕೆಯಾದ ಪರಿಣಾಮ, ಸುಮಾರು 100ಕ್ಕೂ ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ ಮಹಾನಿರ್ದೇಶಕ ಎಸ್ ಎನ್ ಪ್ರಧಾನ್ ಹೇಳಿದ್ದಾರೆ.
ಎನ್ಡಿಆರ್ಎಫ್ನ ವಿಶೇಷ ಅನಿಲ ಸೋರಿಕೆ ತಂಡವು ಸ್ಥಳದಲ್ಲೇ ಇದ್ದು, ಘಟನೆಯಿಂದ ತೊಂದರೆ ಅನುಭವಿಸುತ್ತಿರುವ ಜನರನ್ನು ಪರಿಶೀಲಿಸುತ್ತಿದೆ ಎಂದು ಅವರು ಹೇಳಿದ್ದಾರೆ. ಇದು ನರಮಂಡಲ, ಗಂಟಲು, ಚರ್ಮ, ಕಣ್ಣುಗಳು ಮತ್ತು ದೇಹದ ಕೆಲವು ಭಾಗಗಳ ಮೇಲೆ ಪರಿಣಾಮ ಬೀರುವ ಸ್ಟೈರೀನ್ ಅನಿಲ ಎಂದು ಪ್ರಧಾನ್ ತಿಳಿಸಿದ್ದಾರೆ.