ಕರ್ನಾಟಕ

karnataka

ETV Bharat / bharat

ಲವ್​, ಲಾಂಗ್​ ರೈಡ್​, ಬ್ಲಾಕ್​ಮೇಲ್​.. ಅಪ್ರಾಪ್ತರು ಸೇರಿ ನಾಲ್ವರಿಂದ ಬಾಲಕಿ ಮೇಲೆ ಗ್ಯಾಂಗ್​ರೇಪ್​! - ಹೈದರಾಬಾದ್​ ಬಾಲಕಿ ಗ್ಯಾಂಗ್​ರೇಪ್​ ಸುದ್ದಿ

ಲವ್​, ಲಾಂಗ್​ರೈಡ್​ ಅಂತಾ ಬಾಲಕಿಯೊಂದಿಗೆ ಮಜಾ ಮಾಡಿದ ಯುವಕನೊಬ್ಬ ಆಕೆಯ ನಗ್ನಚಿತ್ರಗಳನ್ನು ಮೊಬೈಲ್​ನಲ್ಲಿ ಸೆರೆಹಿಡಿದು ಬ್ಲಾಕ್​ಮೇಲ್​ ಮಾಡಿ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ತೆಲಂಗಾಣದ ಹೈದರಾಬಾದ್​ನಲ್ಲಿ ನಡೆದಿದೆ.

Gangrape on Minor girl, Gangrape on Minor girl in Hyderabad, Hyderabad girl gangrape, Hyderabad girl gangrape news, ಬಾಲಕಿ ಮೇಲೆ ಗ್ಯಾಂಗ್​ರೇಪ್, ಹೈದರಾಬಾದ್​ನಲ್ಲಿ ಬಾಲಕಿ ಮೇಲೆ ಗ್ಯಾಂಗ್​ರೇಪ್, ಹೈದರಾಬಾದ್​ ಬಾಲಕಿ ಗ್ಯಾಂಗ್​ರೇಪ್​, ಹೈದರಾಬಾದ್​ ಬಾಲಕಿ ಗ್ಯಾಂಗ್​ರೇಪ್​ ಸುದ್ದಿ,
ಅಪ್ರಾಪ್ತರು ಸೇರಿ ನಾಲ್ವರಿಂದ ಬಾಲಕಿ ಮೇಲೆ ಗ್ಯಾಂಗ್​ರೇಪ್

By

Published : Aug 27, 2020, 6:01 PM IST

ಹೈದರಾಬಾದ್​: ಬಾಲಕಿ ಮೇಲೆ ಮೂವರು ಅಪ್ರಾಪ್ತರು ಸೇರಿ ನಾಲ್ವರು ಅತ್ಯಾಚಾರ ಎಸಗಿರುವ ಘಟನೆ ನಗರದಲ್ಲಿ ನಡೆದಿದೆ.

14 ವರ್ಷದ ಬಾಲಕಿ ಮತ್ತು ಬೀದಲ್​ಬಸ್ತಿ ನಿವಾಸಿ ಶಿವಕುಮಾರ್​ (23) ಕೆಲವು ದಿನಗಳಿಂದ ಪ್ರೀತಿಸುತ್ತಿದ್ದರು. ಲಾಂಗ್​ಡ್ರೈವ್​ ಹೆಸರಲ್ಲಿ ಬಾಲಕಿಯನ್ನು ಅನೇಕ ಬಾರಿ ಬೈಕ್​ನಲ್ಲಿ ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಬಾಲಕಿಯ ನಗ್ನ ಚಿತ್ರಗಳನ್ನು ತನ್ನ ಮೊಬೈಲ್​ನಲ್ಲಿ ಸೆರೆಹಿಡಿದ್ದಾನೆ. ಬಳಿಕ ಶಿವುಕುಮಾರ್​ ಅವುಗಳನ್ನು ಬಾಲಕಿಗೆ ತೋರಿಸಿ ವರ್ಷಗಳಿಂದ ಕಿರುಕುಳ ನೀಡುತ್ತಾ ಬಂದಿದ್ದಾನೆ.

ನಾನು ಹೇಳಿದ ಸ್ಥಳಕ್ಕೆ ಬಂದ್ರೆ ನಗ್ನ ಚಿತ್ರಗಳನ್ನು ಡಿಲೀಟ್​ ಮಾಡುವುದಾಗಿ ವಾರದ ಹಿಂದೆ ಶಿವಕುಮಾರ್​ ಬಾಲಕಿಗೆ ಹೇಳಿದ್ದಾನೆ. ಆತನ ಮಾತು ನಂಬಿದ ಬಾಲಕಿ ಹಳೇ ಕಟ್ಟಡವೊಂದಕ್ಕೆ ತೆರಳಿದ್ದಾಳೆ. ಅಲ್ಲಿ ಶಿವಕುಮಾರ್​ ತನ್ನ ಮೂವರು ಸ್ನೇಹಿತರ ಜೊತೆಗೂಡಿ ಆಕೆ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಮೊಬೈಲ್​ನಲ್ಲಿ ಚಿತ್ರೀಕರಿಸಿದ್ದಾರೆ. ಬಳಿಕ ಯಾರಿಗೂ ಹೇಳದಂತೆ ಬೆದರಿಕೆಯೊಡ್ಡಿದ್ದಾರೆ.

ಅತ್ಯಾಚಾರ ಬಳಿಕ ಬಾಲಕಿ ಮನೆಗೆ ತೆರಳಿದ್ದಾಳೆ. ಮರುದಿನ ಅನಾರೋಗ್ಯಕ್ಕೆ ಗುರಿಯಾಗಿದ್ದರಿಂದ ಕುಟುಂಬಸ್ಥರು ಬಾಲಕಿಗೆ ವಿಚಾರಿಸಿದ್ದಾರೆ. ಬಳಿಕ ನಡೆದ ಘಟನೆ ಬಗ್ಗೆ ಪೋಷಕರಿಗೆ ಹೇಳಿದ್ದಾಳೆ. ಎರಡು ದಿನಗಳ ಹಿಂದೆ ಬಾಲಕಿ ಪೋಷಕರು ಚಿಲಕಲಗೂಡು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರು ಅಪ್ರಾಪ್ತರು ಸೇರಿದಂತೆ ನಾಲ್ವರನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details