ಕರ್ನಾಟಕ

karnataka

ETV Bharat / bharat

ಇಷ್ಟೊಂದು ನೋಟುಗಳ ಗಣಪ... ವಿನಾಯಕನಿಗೆ ಕೋಟಿ...ಕೋಟಿ ವಂದನೆ! - Ganesha

ಚೌತಿ ಹಬ್ಬಕ್ಕಾಗಿ ಭೂಲೋಕದಲ್ಲಿ ವಿವಿಧ ಅವತಾರಗಳಲ್ಲಿ ಪ್ರಥಮ ಪೂಜಿತ ಮಹಾಗಣಪತಿ ಅವತರಿಸಿದ್ದಾನೆ. ಗಣೇಶನನ್ನು ವಿವಿಧ ರೀತಿಗಳಲ್ಲಿ ಅಲಂಕರಿಸಿ ಪೂಜೆ ಮಾಡಲಾಗುತ್ತಿದೆ. ಈ ನಡುವೆ ಆಂಧ್ರದ ಗುಂಟೂರಿನಲ್ಲಿ ಮಾಡಲಾದ ಗಣೇಶನ ವಿಶೇಷ ಅಲಂಕಾರ ಭಕ್ತರನ್ನು ಆಕರ್ಷಿಸುತ್ತಿದೆ.

ವಿನಾಯಕನಿಗೆ ನೋಟಿನ ವಂದನೆ

By

Published : Sep 10, 2019, 1:54 PM IST

ಗುಂಟೂರು(ಆಂಧ್ರಪ್ರದೇಶ) :ಎಲ್ಲಿ ನೋಡಿದರೂ 100, 200, 300, 500 ಹಾಗೂ 2000 ರೂ. ಮುಖಬೆಲೆಯ ನೋಟುಗಳು. ನೋಟುಗಳ ನಡುವೆ ವಿರಾಜಮಾನನಾಗಿರೋ ವಿಘ್ನನಿವಾರಕ. ಇದು ಗುಂಟೂರಿನ ವಾಸವಿ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ಸ್ಥಾಪಿತಗೊಂಡಿರುವ ವಿಶೇಷ ಚೌತಿ ಗಣೇಶ.

ದೇಗುಲದ ಸಮಿತಿಯು ಈ ಬಾರಿ ವಿಭಿನ್ನವಾಗಿ ಲಂಬೋದರನನ್ನು ಅಲಂಕರಿಸಿದ್ದಾರೆ. ಮೂಷಿಕ ವಾಹನ ಮಾತ್ರವಲ್ಲದೇ, ಆತನನ್ನು ಪ್ರತಿಷ್ಟಾಪಿಸಿರುವ ಮಂಟಪವನ್ನೂ ಕೂಡಾ ಸಂಪೂರ್ಣವಾಗಿ ನೋಟುಗಳಿಂದಲೇ ಅಲಂಕರಿಸಲಾಗಿದೆ. ಒಟ್ಟು ಬರೋಬ್ಬರಿ ಒಂದು ಕೋಟಿ 60 ಲಕ್ಷ ರೂ. ಮೌಲ್ಯದ ನೋಟುಗಳನ್ನು ಈ ಗಣೇಶನ ಅಲಂಕಾರಕ್ಕಾಗಿ ಬಳಸಲಾಗಿದೆ.

ವಿನಾಯಕನಿಗೆ ನೋಟಿನ ವಂದನೆ

ಈ ವಕ್ರತುಂಡನನ್ನು ಇದೇ ಸೆಪ್ಟೆಂಬರ್​ 6ರಂದು ಅಲಂಕರಿಸಲಾಗಿದ್ದು, ದೇವಸ್ಥಾನದ ಸಮಿತಿಯ ಒಟ್ಟು 102 ಮಂದಿ ಸೇರಿ ಈ ಅಲಂಕಾರ ಮಾಡಿರುವುದಾಗಿ ಸಮಿತಿಯ ಅಧ್ಯಕ್ಷ ತುಂಗುಂಟ್ಲಾ ನಾಗೇಶ್ವರಾವ್ ತಿಳಿಸಿದ್ದಾರೆ.

ನೋಟುಗಳಿಂದಲೇ ಅಲಂಕಾರಗೊಂಡಿರೋ ಈ ಲಕ್ಷ್ಮೀ ಗಣೇಶನನ್ನು ನೋಡೋದಿಕ್ಕೆ ಭಕ್ತಸಾಗರವೇ ಹರಿದುಬರುತ್ತಿದೆ.

ABOUT THE AUTHOR

...view details