ನಾಸಿಕ್(ಮಹಾರಾಷ್ಟ್ರ): ಇಲ್ಲಿನ ಪ್ರಖ್ಯಾತ ಸಿದ್ಧಿವಿನಾಯಕ ದೇವಾಲಯದಲ್ಲಿ ಗಣೇಶನ ಮೂರ್ತಿಗೆ ಮಾಸ್ಕ್ ತೊಡಿಸುವ ಮೂಲಕ ಜನರಲ್ಲಿ ಕೊರೊನಾ ವೈರಸ್ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.
ಗಣೇಶನಿಗೂ ಮಾಸ್ಕ್, ಕೊರೊನಾದಿಂದ ಜಾಗೃತರಾಗುವಂತೆ ಏಕದಂತನಿಂದ ಸಂದೇಶ... - ಮಹಾರಾಷ್ಟ್ರ ಕೊರೊನಾ ಸುದ್ದಿ
ಜಗತ್ತಿನೆಲ್ಲೆಡೆ ಕೊರೊನಾದಿಂದಾಗ ಜನ ಭಯಭೀತರಾಗಿದ್ದು, ವೈರಸ್ ಹರಡದಂತೆ ಜಾಗೃತರಾಗುತ್ತಿದ್ದಾರೆ. ಸದ್ಯ ದೇವರಿಗೂ ವೈರಸ್ ಹರಡೋ ಭಯ ಹಾಗೂ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ದೇವರಿಗೂ ಮಾಸ್ಕ್ ತೊಡಿಸುವ ಕಾರ್ಯಕ್ಕೆ ಜನ ಮುಂದಾಗಿದ್ದಾರೆ.
ಗಣೇಶನಿಗೂ ಮಾಸ್ಕ್!
ಜಗತ್ತಿನೆಲ್ಲೆಡೆ ವೈರಸ್ ಹರಡೋ ಬೀತಿ ಎದುರಾಗಿದ್ದು, ಜನರು ನಾನಾ ರೀತಿಯಲ್ಲಿ ವೈರಸ್ ಹರಡದಂತೆ ಸರ್ಕಸ್ ಮಾಡುತ್ತಿದ್ದಾರೆ. ಈ ನಡುವೆ ಗಣೇಶನಿಗೂ ಮಾಸ್ಕ್ ತೊಡಿಸಿರುವ ದೇಗುಲದ ಆಡಳಿತಾಧಿಕಾರಿಗಳು, ಜನರು ಕೂಡಾ ವೈರಸ್ ಬಗ್ಗೆ ಜಾಗೃತರಾಗಿರುವಂತೆ ಕೇಳಿಕೊಂಡಿದ್ದಾರೆ.