ವಡೋದರ (ಗುಜರಾತ್): ನಾವು ಬಗೆ ಬಗೆಯ ಪರಿಸರ ಸ್ನೇಹಿ ಗಣೇಶ ವಿಗ್ರಹಗಳನ್ನ ನೋಡಿರುತ್ತೇವೆ. ಗುಜರಾತ್ನ ವಡೋದರದಲ್ಲಿನ 'ಕಾಮಧೇನು ಗೋವು ಅಮೃತ' ಎಂಬ ಸಂಸ್ಥೆ ಹಬ್ಬದ ಪ್ರಯುಕ್ತ ದನದ ಸಗಣಿಯಿಂದ ಗಣೇಶ ಮೂರ್ತಿಗಳನ್ನ ತಯಾರಿಸಿದೆ.
ಗೋವಿನ ಸಗಣಿ ಹಿಂದೂ ಧರ್ಮದಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ ಮತ್ತು ಇದನ್ನು ಪವಿತ್ರವೆಂದು ಪರಿಗಣಿಸಲಾಗಿದೆ. ಹೀಗೆ ಹಸುವಿನ ಸಗಣಿಯಿಂದ ತಯಾರಿಸಿರುವ ಮೂರ್ತಿಗಳಿಗೆ 'ವೇದಿಕ್ ಗಣೇಶ ವಿಗ್ರಹ' ಎಂದು ಹೆಸರಿಟ್ಟು, ಅತಿ ಕಡಿಮೆ ಬೆಲೆಗೆ ಈ ಸಂಸ್ಥೆ ಮಾರಾಟ ಮಾಡುತ್ತಿದೆ.
ಹಸುವಿನ ಸಗಣಿಯಿಂದ ತಯಾರಾಯ್ತು ಪರಿಸರ ಸ್ನೇಹಿ ಗಣೇಶ ಮೂರ್ತಿ ಈ ವಿಗ್ರಹಗಳನ್ನು ಗೋವಿನ ಸಗಣಿಯಿಂದ ನಿರ್ಮಿಸಿರುವುದರಿಂದ ನದಿಯಲ್ಲಿಯೇ ನಿಮಜ್ಜನ ಮಾಡಬೇಕೆಂದಿಲ್ಲ. ನೀರಿನ ತೊಟ್ಟಿಗಳಲ್ಲಿಯೂ ಮುಳುಗಿಸಬಹುದು. ಅಲ್ಲದೇ ಅದನ್ನು ರಸಗೊಬ್ಬರವಾಗಿ ಬಳಸಬಹುದು. ಮತ್ತೊಂದು ಪ್ರಯೋಜನ ಎಂದರೆ ಪಿಒಪಿ ಅಥವಾ ಜೇಡಿಮಣ್ಣಿನಿಂದ ಮಾಡಿದ ವಿಗ್ರಹಗಳಿಗಿಂತ ಅಗ್ಗವಾಗಿದೆ ಎಂದು ಕಾಮಧೇನು ಗೋವು ಅಮೃತ ಸಂಸ್ಥೆ ನಿರ್ದೇಶಕ ಮುಖೇಶ್ ಗುಪ್ತಾ ತಿಳಿಸುತ್ತಾರೆ.
ಪ್ರಸ್ತುತ ಹವಾಮಾನ ಮತ್ತು ಕೋವಿಡ್ ಬಿಕ್ಕಟ್ಟಿನ ಕಾರಣದಿಂದ ಅನೇಕ ಆರ್ಡರ್ಗಳು ರದ್ದಾಗಿವೆ. ವಿಗ್ರಹಗಳೂ ಸಿದ್ಧವಾದರೂ ನಿರಂತರ ಮಳೆ ಮತ್ತು ಸೂರ್ಯನ ಬೆಳಕಿನ ಕೊರತೆಯಿಂದಾಗಿ ಅವುಗಳನ್ನು ಒಣಗಿಸಲು ಕಲಾವಿದರಿಗೆ ತೊಂದರೆಯಾಗಿದೆ. ಈ ವಿಗ್ರಹಗಳನ್ನು ಮಾಡುವುದು ಬಹಳ ಕಷ್ಟ. ಮಾಡಿದ 50 ವಿಗ್ರಹಗಳಲ್ಲಿ 30 ಮಾತ್ರ ಯಶಸ್ವಿಯಾಗುತ್ತವೆ ಎನ್ನುತ್ತಾರೆ ಮುಖೇಶ್ ಗುಪ್ತಾ