ನವದೆಹಲಿ: ಮಹಾತ್ಮ ಗಾಂಧಿಯವರ 151ನೇ ಜಯಂತ್ಯುತ್ಸವದಂದು, ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ರಾಷ್ಟ್ರಪಿತನ ಕುರಿತ ಕೆಲ ಸಿನಿಮಾಗಳ ಪ್ರಸಾರ ಕಾಣಲಿವೆ. ಅವರ ಬೋಧನೆಗಳು, ಅಹಿಂಸೆಯ ಅಭ್ಯಾಸ ಮತ್ತು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಮಹತ್ವದ ಕೊಡುಗೆಗಳು ನಮ್ಮೆಲ್ಲರಿಗೂ ಮಾರ್ಗದರ್ಶನವಾಗಿವೆ. ಗಾಂಧಿಯವರ ಬಗ್ಗೆ ಹೆಚ್ಚು ತಿಳಿದಿಲ್ಲದ ಕೆಲವು ಚಲನಚಿತ್ರಗಳ ಪಟ್ಟಿ ಇಲ್ಲಿದೆ.
'ಹಮ್ನೆ ಗಾಂಧಿ ಕೋ ಮಾರ್ ದಿಯಾ': ನಯೀಮ್ ಎ ಸಿದ್ದಿಕಿ ನಿರ್ದೇಶನದ 2018ರ ಚಲನಚಿತ್ರವು ಕೈಲಾಶ್ ಮತ್ತು ದಿವಾಕರ್ ಎಂಬ ಇಬ್ಬರು ಅಪರಿಚಿತರ ಕಥೆಯನ್ನು ನಿರೂಪಿಸುತ್ತದೆ. ಬ್ರಿಟಿಷ್ ರಾಜ್ಯದ ಆಳ್ವಿಕೆ, ವಿಭಜನೆಯ ಪ್ರಕ್ಷುಬ್ಧ ವಾತಾವರಣದ ವಿರುದ್ಧದ ಕಥೆಯನ್ನು ಆಧರಿಸಿ ಈ ಚಿತ್ರ ನಿರ್ಮಾಣವಾಗಿದೆ. ಮಹಾತ್ಮ ಗಾಂಧಿಯವರ ಹತ್ಯೆಗೆ ಹೊಂದಿಕೆಯಾಗುವ ರೀತಿಯಲ್ಲಿ ಮತ್ತು ಅವರ ತತ್ವಗಳನ್ನು ವಿರೋಧಿಸುವ ಇಬ್ಬರ ಪಾತ್ರದಲ್ಲಿ ಈ ಚಿತ್ರ ಸಾಗುತ್ತದೆ. ಈ ಚಿತ್ರವನ್ನು ಶೆಮರೂ ಆ್ಯಪ್ನಲ್ಲಿ ನೋಡಬಹುದು.
'ರೋಡ್ ಟು ಸಂಗಮ್': 2009ರಲ್ಲಿಅಮಿತ್ ರಾಯ್ ನಿರ್ದೇಶಿಸಿದ ಚಲನಚಿತ್ರವು ಉತ್ತರಪ್ರದೇಶದಲ್ಲಿ ನೆಲೆಸಿರುವ ಧರ್ಮನಿಷ್ಠ ಮುಸ್ಲಿಂ ಹಸ್ಮತ್ ಅವರ ಕಥೆಯನ್ನು ಚಿತ್ರಿಸುತ್ತದೆ. ಹಸ್ಮತ್ ಎಂಬ ಓರ್ವ ಮೆಕ್ಯಾನಿಕ್ ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.