ಕರ್ನಾಟಕ

karnataka

ETV Bharat / bharat

ಮಸಾಲೆ ಪದಾರ್ಥಗಳಿಂದ ತಯಾರಾಯ್ತು ಗಣೇಶನ ಪ್ರತಿಮೆ!: ಅಷ್ಟಕ್ಕೂ ಇದರ ಉದ್ದೇಶವೇನು?

ಜೈಪುರದ ಗಣೇಶ ವಿಗ್ರಹ ತಯಾರಿಸುವ ಕಲಾವಿದರೊಬ್ಬರು ದಾಲ್ಚಿನ್ನಿ, ಕರಿಮೆಣಸು, ಲವಂಗ, ಗುಡುಚಿ, ಅರಿಶಿಣ ಮೊದಲಾದ ಮಸಾಲೆ ಪದಾರ್ಥಗಳನ್ನು ಬಳಸಿ ಗಣೇಶನ ವಿಗ್ರಹಗಳನ್ನು ತಯಾರಿಸಿದ್ದಾರೆ.

Ganapati idol made of spices in Jaipur
ಗಣೇಶನ ಪ್ರತಿಮೆ

By

Published : Aug 22, 2020, 4:40 PM IST

Updated : Aug 22, 2020, 4:49 PM IST

ಜೈಪುರ (ರಾಜಸ್ಥಾನ): ಕೋವಿಡ್ -19 ಭೀತಿಯ ನಡುವೆ, ಪರಿಸರ ಸ್ನೇಹಿ ಗಣೇಶ ವಿಗ್ರಹಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಹೀಗಾಗಿ ವಿವಿಧ ಧಾನ್ಯಗಳು, ಮಸಾಲೆ ಪದಾರ್ಥ ಮತ್ತು ದನದ ಸಗಣಿಯ ವಿಗ್ರಹಗಳ ತಯಾರಿಗೂ ಕಲಾವಿದರಿಗೆ ಪ್ರೋತ್ಸಾಹ ದೊರಕಿದೆ.

ಗಣೇಶನ ಪ್ರತಿಮೆ

ರಾಜಸ್ಥಾನ ರಾಜಧಾನಿ ಜೈಪುರದ ಕಲಾವಿದರೊಬ್ಬರಿಗೆ ಮಸಾಲೆ ಪದಾರ್ಥಗಳಿಂದ ಪ್ರಥಮ ಪೂಜಿತನ ವಿಗ್ರಹ ತಯಾರಿಸುವ ವಿಶಿಷ್ಟ ಆಲೋಚನೆ ಬಂದಿದೆ. ಕಲಾವಿದ ಶಿವಚರಣ್ ಯಾದವ್​, ವಿವಿಧ ಮಸಾಲೆ ಪದಾರ್ಥಗಳಾದ ದಾಲ್ಚಿನ್ನಿ, ಕರಿಮೆಣಸು, ಲವಂಗ, ಗುಡುಚಿ ಹಾಗು ಅರಿಶಿಣಗಳಿಂದ ಏಕದಂತನ ವಿಗ್ರಹಗಳನ್ನು ತಯಾರಿಸಿದ್ದಾರೆ.

ಗಣೇಶನ ಪ್ರತಿಮೆ

ಈ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿದ ಯಾದವ್, ಈ ಬಾರಿಯ ಗಣೇಶ ಚತುರ್ಥಿಯಂದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣ ಲಕ್ಷಣಗಳಿಂದ ಸಮೃದ್ಧವಾಗಿರುವ ಮಸಾಲೆ ಪದಾರ್ಥಗಳನ್ನು ಬಳಸಿ ಗಣೇಶನ ವಿಗ್ರಹಗಳನ್ನು ತಯಾರಿಸುತ್ತಿದ್ದೇವೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕಶಾಯ ಸೇವಿಸುವಂತೆ ಜನರನ್ನು ಪ್ರಚೋದಿಸುವ ಉದ್ದೇಶದಿಂದ ಈ ವಿಭಿನ್ನ ಆಲೋಚನೆಗೆ ಬಂದಿದ್ದೇನೆ ಎಂದಿದ್ದಾರೆ.

ಗಣೇಶನ ಪ್ರತಿಮೆ

ಈ ವಿಗ್ರಹಗಳ ಅನುಕೂಲಗಳೆಂದರೆ, ಪೂಜೆಯ ನಂತರ ಅವುಗಳನ್ನು ನಿಮಜ್ಜನ ಮಾಡಬೇಕಿಲ್ಲ. ಇದರಲ್ಲಿರುವ ಗಿಡಮೂಲಿಕೆಗಳನ್ನು ತಮ್ಮ ವೈಯಕ್ತಿಕ ಅಗತ್ಯಗಳಿಗೆ ಅನುಗುಣವಾಗಿ ಬಳಸಬಹುದಾಗಿದೆ.

Last Updated : Aug 22, 2020, 4:49 PM IST

ABOUT THE AUTHOR

...view details