ಕರ್ನಾಟಕ

karnataka

ETV Bharat / bharat

ಗಾಲ್ವಾನ್ ವ್ಯಾಲಿ ಘರ್ಷಣೆ: ಪಶ್ಚಿಮ ಬಂಗಾಳ ತಲುಪಿದ ಹುತಾತ್ಮ ಯೋಧರ ಪಾರ್ಥಿವ ಶರೀರ

ಸಿಪಾಯಿ ರಾಜೇಶ್ ಒರಾಂಗ್ ಮತ್ತು ಹವಾಲ್ದಾರ್ ಬಿಪುಲ್ ರಾಯ್ ಅವರ ಮೃತದೇಹಗಳನ್ನು ಪನಾಗರ್ ಮತ್ತು ಹಸಿಮರ್​ ಮಿಲಿಟರಿ ಆಸ್ಪತ್ರೆಯಿಂದ ರಸ್ತೆ ಮೂಲಕ ಅವರ ಮನೆಗಳಿಗೆ ಕೊಂಡೊಯ್ಯಲಾಗುವುದು ಎಂದು ಸೇನೆಯ ವಕ್ತಾರರು ತಿಳಿಸಿದ್ದಾರೆ.

army
army

By

Published : Jun 19, 2020, 11:56 AM IST

ಕೋಲ್ಕತಾ(ಪಶ್ಚಿಮ ಬಂಗಾಳ):ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಚೀನಾದ ಸೈನಿಕರೊಂದಿಗಿನ ಘರ್ಷಣೆಯಲ್ಲಿ ಮೃತಪಟ್ಟ ಪಶ್ಚಿಮ ಬಂಗಾಳದ ಇಬ್ಬರು ಸೈನಿಕರ ಹಳ್ಳಿಗಳಲ್ಲಿ ಚೀನಾ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೆ, ಯೋಧರನ್ನು ಕಳೆದುಕೊಂಡಿದ್ದಕ್ಕೆ ದುಃಖ ಮಡುಗಟ್ಟಿದೆ.

ಸಿಪಾಯಿ ರಾಜೇಶ್ ಒರಾಂಗ್ ಮತ್ತು ಹವಾಲ್ದಾರ್ ಬಿಪುಲ್ ರಾಯ್ ಅವರ ಮೃತದೇಹಗಳನ್ನು ಪನಾಗರ್ ಮತ್ತು ಹಸಿಮರ್​ ಮಿಲಿಟರಿ ಆಸ್ಪತ್ರೆಯಿಂದ ರಸ್ತೆ ಮೂಲಕ ಅವರ ಮನೆಗಳಿಗೆ ಕರೆದೊಯ್ಯಲಾಗುವುದು ಎಂದು ಸೇನೆಯ ವಕ್ತಾರರು ತಿಳಿಸಿದ್ದಾರೆ.

ರಾಜೇಶ್ ಒರಾಂಗ್ ಮತ್ತು ಬಿಪುಲ್ ರಾಯ್ ಅವರ ಮೃತದೇಹವು ಗುರುವಾರ ಮಿಲಿಟರಿ ವಿಮಾನದ ಮೂಲಕ ಪನಾಗರ್ ಮತ್ತು ಹಸಿಮರ್​ ತಲುಪಿದೆ.

ಇಂದು ರಾಜೇಶ್ ಒರಾಂಗ್ ಅವರ ಮೃತದೇಹವನ್ನು ಬೆಲ್ಗೊರಿಯಾದಲ್ಲಿರುವ ಅವರ ಮನೆಗೆ ಹಾಗೂ ಬಿಪುಲ್ ರಾಯ್ ಅವರ ಮೃತದೇಹವನ್ನು ಅಲಿಪುರ್ದುರ್‌ನ ಬಿಂದಿಪರಾ ಗ್ರಾಮಕ್ಕೆ ಕೊಂಡೊಯ್ಯಲಾಗುವುದು ಎಂದು ಸೇನೆಯ ವಕ್ತಾರರು ತಿಳಿಸಿದ್ದಾರೆ.

ABOUT THE AUTHOR

...view details