ಕರ್ನಾಟಕ

karnataka

ETV Bharat / bharat

ಓಎಂಸಿ ಅಕ್ರಮ ಗಣಿಗಾರಿಕೆ: ಹೈದರಾಬಾದ್​​ ಸಿಬಿಐ ಕೋರ್ಟ್​ಗೆ ಹಾಜರಾದ ಗಾಲಿ, ವಿಚಾರಣೆ 11ಕ್ಕೆ ಮುಂದೂಡಿಕೆ - ಹೈದರಾಬಾದ್​​ ಸಿಬಿಐ ನ್ಯಾಯಾಲಯ

ಇಂದು ಹೈದರಾಬಾದ್​​ ಸಿಬಿಐ ನ್ಯಾಯಾಲಯದಲ್ಲಿ ಓಎಂಸಿ ಪ್ರಕರಣ ವಿಚಾರಣೆ ನಡೆದಿದ್ದು, ಪ್ರಕರಣದ ಪ್ರಮುಖ ಆರೋಪಿಗಳು ಗಾಲಿ ಜನಾರ್ದನ​​ ರೆಡ್ಡಿ, ಶ್ರೀನಿವಾಸ್​​ ರೆಡ್ಡಿ, ಶ್ರೀಲಕ್ಷ್ಮಿ, ರಾಜಗೋಪಾಲ್​​ ನ್ಯಾಯಾಲಯಕ್ಕೆ ಹಾಜರಾದರು.

ಸಿಬಿಐ ಕೋರ್ಟ್

By

Published : Sep 6, 2019, 3:26 PM IST

ಹೈದರಾಬಾದ್:​​ಓಬಳಾಪುರಂ ಮೈನಿಂಗ್​ ಕಂಪನಿ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಹೈದರಾಬಾದ್ ಸಿಬಿಐ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ನಡೆದಿದ್ದು, ಮುಂದಿನ ವಿಚಾರಣೆ ಇದೇ ಇಂಗಳ 11ಕ್ಕೆ ಮುಂದೂಡಲಾಗಿದೆ.

ಹೈದರಾಬಾದ್​​ ಸಿಬಿಐ ಕೋರ್ಟ್​ಗೆ ಹಾಜರಾದ ಗಾಲಿ

ಪ್ರಕರಣದ ಪ್ರಮುಖ ಆರೋಪಿಗಳು ಗಾಲಿ ಜನಾರ್ದನ್​​ ರೆಡ್ಡಿ, ಶ್ರೀನಿವಾಸ್​​ ರೆಡ್ಡಿ, ಶ್ರೀಲಕ್ಷ್ಮಿ, ರಾಜಗೋಪಾಲ್​​ ನ್ಯಾಯಾಲಯಕ್ಕೆ ಹಾಜರಾದರು. ಸಿಬಿಐ ನ್ಯಾಯಾಲಯದಲ್ಲಿ ಓಎಂಸಿ ಪ್ರಕರಣ ಕುರಿತಂತೆ ವಾದ ಮಂಡಿಸಿದ್ದು, ಮುಂದಿನ ವಿಚಾರಣೆ ಇದೇ ತಿಂಗಳ 11ಕ್ಕೆ ಸಿಬಿಐ ಕೋರ್ಟ್​​ ಮುಂದೂಡಲಾಗಿದೆ.

ಓಬಳಾಪುರಂ ಮೈನಿಂಗ್​​ ಕಂಪನಿ ಅಕ್ರಮಗಳ ಮೇಲೆ ಸಿಬಿಐ ಕೇಸ್​​ ದಾಖಲಾಗಿತ್ತು. ಈ ಪ್ರಕರಣದಲ್ಲಿ ಈಗಾಗಲೇ ಗಾಲಿ ಜನಾರ್ದನ​​ ರೆಡ್ಡಿ ಹಾಗೂ ಕೆಲ ರಾಜಕೀಯ ಮುಖಂಡರು, ಉನ್ನತಾಧಿಕಾರಿಗಳು ಜೈಲಿಗೆ ಹೋಗಿ ಬಂದಿದ್ದಾರೆ.

ABOUT THE AUTHOR

...view details