ನವದೆಹಲಿ: ತರಬೇತಿಗಾಗಿ ಇಬ್ಬರು ಫ್ಲೈಟ್ ಸರ್ಜನ್‌ಗಳು ಶೀಘ್ರದಲ್ಲೇ ರಷ್ಯಾಕ್ಕೆ ತೆರಳಲಿದ್ದಾರೆ ಎಂದು ಇಸ್ರೋ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇಬ್ಬರು ಫ್ಲೈಟ್ ಸರ್ಜನ್‌ಗಳು ಶೀಘ್ರದಲ್ಲೇ ರಷ್ಯಾಕ್ಕೆ ಹಾರಲಿದ್ದಾರೆ. ಗಗನ್ಯಾನ್ ಮಿಷನ್ಗಾಗಿ ರಷ್ಯಾದ ಸಹವರ್ತಿಗಳಿಂದ ಬಾಹ್ಯಾಕಾಶ ಔಷಧದಲ್ಲಿ ತರಬೇತಿ ಪಡೆಯುತ್ತಾರೆ ಎಂದು ತಿಳಿಸಿದ್ದಾರೆ.
ಫ್ಲೈಟ್ ಸರ್ಜನ್‌ಗಳು ಭಾರತೀಯ ವಾಯುಸೇನೆಯ ವೈದ್ಯರಾಗಿದ್ದು, ಅವರು ಏರೋಸ್ಪೇಸ್ ಮೆಡಿಸಿನ್‌ನಲ್ಲಿ ಪರಿಣಿತಿ ಹೊಂದಿದ್ದಾರೆ. ಗಗನಯಾತ್ರಿಗಳ ಈ ತರಬೇತಿ ಮಾನವ ಬಾಹ್ಯಾಕಾಶ ಮಿಷನ್ ಯೋಜನೆಯ ನಿರ್ಣಾಯಕ ಅಂಶವಾಗಿದೆ. ಹಾರಾಟದ ಮೊದಲು ಹಾಗೂ ನಂತರ ಗಗನಯಾತ್ರಿಗಳ ಆರೋಗ್ಯಕ್ಕೆ ಈ ಫೈಟ್ ಸರ್ಜನ್‌ಗಳ ಪಾತ್ರ ಪ್ರಮುಖವಾಗಿದೆ.