ಕರ್ನಾಟಕ

karnataka

ETV Bharat / bharat

ಮೋದಿಗೆ ಎದುರಾಯಿತು ಮೊದಲ ಕಂಟಕ... ಭಾರತದ ಪಟ್ಟ ಕಿತ್ತುಕೊಂಡ ಚೀನಾ - undefined

ಹಿಂದಿನ ಹಣಕಾಸು ವರ್ಷದ ಜನವರಿ- ಮಾರ್ಚ್ ಅವಧಿಯ 4ನೇ ತ್ರೈಮಾಸಿಕದಲ್ಲಿನ ಜಿಡಿಪಿಯು ಶೇ 5.8ರಷ್ಟು ಇದೆ. ವರ್ಷದ ಹಿಂದೆ ಈ ಅವಧಿಯಲ್ಲಿ ಇದು ಶೇ 8.1ರಷ್ಟು ಇತ್ತು. ಕಳೆದ 17 ತ್ರೈಮಾಸಿಕಗಳಲ್ಲಿನ ಅತಿ ಕಡಿಮೆ ಮಟ್ಟ ಇದಾಗಿದೆ.

ಸಾಂದರ್ಭಿಕ ಚಿತ್ರ

By

Published : Jun 1, 2019, 9:17 AM IST

Updated : Jun 1, 2019, 9:44 AM IST

ಮುಂಬೈ:ದೇಶದಲ್ಲಿನ 2018-19ನೇ ಹಣಕಾಸು ವರ್ಷದಲ್ಲಿ ಆರ್ಥಿಕ ವೃದ್ಧಿ ದರವು (ಜಿಡಿಪಿ) ಶೇ 6.8ಕ್ಕೆ ದಾಖಲಾಗಿದ್ದು, ಇದು ಕಳೆದ ಐದು ವರ್ಷಗಳಲ್ಲಿ ಕನಿಷ್ಠ ಮಟ್ಟಕ್ಕೆ ಇಳಿದಿದೆ.

2014-15ರಿಂದ ಈಚೆಗಿನ ಅತಿ ಕಡಿಮೆ ಮಟ್ಟದ ವೃದ್ಧಿ ದರ ಕಂಡಿದ್ದು ಇದೇ ಮೊದಲು. 2013-14ರಲ್ಲಿ ಶೇ 6.4ರಷ್ಟು ಇದ್ದದ್ದು ಈ ಹಿಂದಿನ ಕಡಿಮೆ ಮಟ್ಟದ ದಾಖಲೆ ಆಗಿತ್ತು.

ಹಿಂದಿನ ಹಣಕಾಸು ವರ್ಷದ ಜನವರಿ- ಮಾರ್ಚ್ ಅವಧಿಯ 4ನೇ ತ್ರೈಮಾಸಿಕದಲ್ಲಿನ ಜಿಡಿಪಿಯು ಶೇ 5.8ರಷ್ಟು ಇದೆ. ವರ್ಷದ ಹಿಂದೆ ಈ ಅವಧಿಯಲ್ಲಿ ಇದು ಶೇ 8.1ರಷ್ಟು ಇತ್ತು. ಕಳೆದ 17 ತ್ರೈಮಾಸಿಕಗಳಲ್ಲಿನ ಅತಿ ಕಡಿಮೆ ಮಟ್ಟ ಇದಾಗಿದೆ.

ವಾರ್ಷಿಕ ವೃದ್ಧಿ ದರವು ವರ್ಷದ ಹಿಂದೆ ಶೇ 7.2ರಷ್ಟು ದಾಖಲಾಗಿತ್ತು. ಶೇ 6.8ರ ಬೆಳವಣಿಗೆಯು ಎರಡು ವರ್ಷಗಳಲ್ಲಿ ಮೊದಲ ಬಾರಿಗೆ ವಿಶ್ವದಲ್ಲಿ ಅತ್ಯಂತ ವೇಗದ ಬೆಳವಣಿಗೆ ದಾಖಲಿಸಿರುವ ಆರ್ಥಿಕತೆ ಎನ್ನುವ ಹೆಗ್ಗಳಿಗೆ ಭಾರತ ಪಾತ್ರವಾಗಿತ್ತು. ಪ್ರಸ್ತುತ ವೃದ್ಧಿ ದರವು ಮೊದಲ ಬಾರಿಗೆ ಚೀನಾಕ್ಕಿಂತ ಭಾರತದ್ದು ಕಡಿಮೆಯಾಗಿದೆ. ಪ್ರಸ್ತುತ ಚೀನಾದ ಜಿಡಿಪಿ ಶೇ 6.4ರಷ್ಟು ಇದೆ. ಒಟ್ಟಾರೆ ಜಿಡಿಪಿಯಲ್ಲಿ ಚೀನಾ ಭಾರತಕ್ಕಿಂತ ಕಡಿಮೆಯೇ ಇದ್ದರೂ, ಈ ತ್ರೈಮಾಸಿಕದಲ್ಲಿ ಚೀನಾ, ಭಾರತವನ್ನ ಹಿಂದಿಕ್ಕಿ ಮುನ್ನುಗ್ಗುತ್ತಿದೆ.

ಕೈಗಾರಿಕೆ, ಕೃಷಿ ಮತ್ತು ಉತ್ಪಾದನಾ ವಲಯಗಳಲ್ಲಿನ ಉತ್ಪಾದನೆಯು ಕಳೆದ 9 ತಿಂಗಳಲ್ಲಿ ಕುಸಿದಿರುವುದು ಜಿಡಿಪಿ ವೃದ್ಧಿ ಕ್ಷೀಣಿಸಲು ಕಾರಣವೆಂದು ವಿಶ್ಲೇಷಿಸಲಾಗುತ್ತಿದೆ.

Last Updated : Jun 1, 2019, 9:44 AM IST

For All Latest Updates

TAGGED:

ABOUT THE AUTHOR

...view details