ರಾಯಗಂಜ್ (ಪಶ್ಚಿಮ ಬಂಗಾಳ):ಇಡೀ ದಿನ ಕಳ್ಳರು ಮತ್ತು ಸಮಾಜ ವಿರೋಧಿ ಕೆಲಸ ಮಾಡುವವರೊಂದಿಗೆ ವ್ಯವಹರಿಸುವ ಇವರು, ಮನೆಗೆ ಮರಳಿದ ನಂತರ, ಅಪ್ಪಟ ಕಲಾವಿದ. ರಾಯ್‌ಗಂಜ್‌ನ ಪೊಲೀಸ್ ಕಾನ್‌ಸ್ಟೇಬಲ್ ಬಿಪ್ಲಾಬ್ ಕುಮಾರ್ ದಾಸ್ ಪೊಲೀಸ್ ಮಾತ್ರವಲ್ಲದೆ, ಕುಶಲಕರ್ಮಿ ಸಹ ಹೌದು.
ಮರದ ತುಂಡು ಅಥವಾ ದೊಡ್ಡ ಕಲ್ಲು ಅಥವಾ ಯಾವುದೇ ವೇಸ್ಟ್ ಲ್ಯಾಮಿನೇಟ್ ತುಣುಕು ಆಗಿರಲಿ ಇವುಗಳಿಂದ ಅದ್ಭುತ ಕರಕುಶಲ ವಸ್ತುಗಳನ್ನು ತಯಾರಿಸುತ್ತಾರೆ.
ಕರ್ತವ್ಯದ ಜತೆಗೆ ಕಲಾ ಪ್ರದರ್ಶನ.. ಮೂಲತಃ ಇಸ್ಲಾಂಪುರದವರಾದ ದಾಸ್ ಈಗ ರಾಯಗಂಜ್ನಲ್ಲಿ ವಾಸಿಸುತ್ತಿದ್ದಾರೆ. ಅವರ ಪತ್ನಿ ಶಾಲಿನಿ ದಾಸ್ ಸಹಾ ಪ್ರಾಥಮಿಕ ಶಾಲಾ ಶಿಕ್ಷಕಿ. ಬಾಲ್ಯದಿಂದಲೂ ಬಿಪ್ಲಾಬ್ ಕುಮಾರ್ ದಾಸ್ ಅವರಿಗೆ ರೇಖಾಚಿತ್ರದ ಬಗ್ಗೆ ಒಲವು. ಆದರೆ, ಆರ್ಥಿಕ ಬಿಕ್ಕಟ್ಟಿನಿಂದಾಗಿ ಅವರು ತಮ್ಮ ಚಿತ್ರಕಲೆ ತರಗತಿಗಳನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ.
ಸದಾಕಾಲ ಕಲೆಯನ್ನು ತಮ್ಮೊಳಗೆ ಜೀವಂತವಾಗಿಟ್ಟುಕೊಂಡಿದ್ದರು. ಪ್ರಸ್ತುತ ಪೊಲೀಸ್ ಕಾನ್‌ಸ್ಟೇಬಲ್ ಆಗಿರುವ ಬಿಪ್ಲಾಬ್ ಕುಮಾರ್ ದಾಸ್, ಕೆಲಸ ಮುಗಿಸಿ ಮನೆಗೆ ಬಂದ ನಂತರ ಅನೇಕ ವಿಭಿನ್ನ ಕಲಾಕೃತಿಗಳನ್ನು ತಯಾರಿಸುತ್ತಾರೆ.
ಬಿಪ್ಲಾಬ್ ಕುಮಾರ್ ದಾಸ್ ತಯಾರಿಸಿದ ಕಲಾಕೃತಿ ಚಿಕ್ಕ ವಯಸ್ಸಿನಿಂದಲೂ ನಾನು ಕರಕುಶಲ ವಸ್ತುಗಳ ಬಗ್ಗೆ ತುಂಬಾ ಒಲವು ಹೊಂದಿದ್ದೆ. ಆದರೆ, ಪೊಲೀಸ್ ವೃತ್ತಿಗೆ ಸೇರಿದ ನಂತರ ಕಲೆಯೊಂದಿಗೆ ಸಮಯ ಕಳೆಯಲು ಸಾಧ್ಯವಾಗಲಿಲ್ಲ. ನಾನು ಅನೇಕ ವಸ್ತುಗಳಿಂದ ನನ್ನದೇ ಆದ ಕಲಾಕೃತಿಗಳನ್ನು ಮಾಡಿದ್ದೇನೆ. ನನ್ನ ಗುರುಗಳೇ ನನಗೆ ಸ್ಫೂರ್ತಿ ಎಂದು ಬಿಪ್ಲಾಬ್ ಕುಮಾರ್ ದಾಸ್ ಹೇಳುತ್ತಾರೆ.
ಬಿಪ್ಲಾಬ್ ಕುಮಾರ್ ದಾಸ್ ತಯಾರಿಸಿದ ಕಲಾಕೃತಿ