ಪುಣೆ(ಮಹಾರಾಷ್ಟ್ರ): ನಾವು ಬಳಸುವ ಹಲವಾರು ವಸ್ತುಗಳು ಪ್ಲಾಸ್ಟಿಕ್. ಅದು ನಮ್ಮ ಜೀವನದ ಒಂದು ಭಾಗ ಆಗಿದೆ. ತ್ಯಾಜ್ಯವೆಂದು ಎಸೆದ ಪ್ಲಾಸ್ಟಿಕ್ ಪರಿಸರಕ್ಕೆ ಮಾರಕ. ಆದರೆ, ಅದರ ಮರುಬಳಕೆಯಿಂದ ಸಿಗುವ ಪ್ರತಿ ಅಂಶವೂ ಉಪಯುಕ್ತ. ಅದು ಹೇಗಂದ್ರೆ ಹೀಗೆ..
ಹೌದೌದು,, ಪ್ಲಾಸ್ಟಿಕ್‌ನಿಂದ ಇಂಧನ ತಯಾರಿಸಬಹುದು.. ಅದ್ಹೇಗೆ ಅಂತೀರಾ, ಇಲ್ನೋಡಿ!! ತಟ್ಟಿದರೆ ಬೆರಣಿಯಾದೆ.. ಸುಟ್ಟರೆ ವಿಭೂತಿಯಾದೆ, ನೀನಾರಿಗಾದೆಯೋ ಎಲೇ ಮಾನವ. ಗೋಮಾತೆಯ ಸಗಣಿಯ ಈ ಯಶೋಗಾಥೆ ಯಾರಿಗೆ ಗೊತ್ತಿಲ್ಲ. ಆದರೆ, ಪರಿಸರಕ್ಕೆ ಮಾರಕ ಪ್ಲಾಸ್ಟಿಕ್ ಕೂಡ ಈಗ ಅದೇ ರಾಗ ಹಾಡುತ್ತಿದೆ. ಪ್ಲಾಸ್ಟಿಕ್ ಸಂಸ್ಕರಣಾ ವೇಳೆ ಉತ್ಪತ್ತಿಯಾಗೋ ಪ್ರತಿ ಅಂಶವೂ ವಿಭಿನ್ನ ರೂಪದಲ್ಲಿ ಬಳಕೆ ಮಾಡಲಾಗುತ್ತಿದೆ. ಈ ವಿನೂತನ ಆವಿಷ್ಕಾರ ಅರೆಕ್ಷಣ ಚಕಿತಗೊಳಿಸುತ್ತೆ.
ಪಳೆಯುಳಿಕೆ ಇಂಧನಗಳು ವೇಗವಾಗಿ ಕ್ಷೀಣಿಸುತ್ತಿವೆ. ಅವು ಪರಿಸರಕ್ಕೂ ಹಾನಿ. ಜಾಗತಿಕ ತಾಪಮಾನ ಏರಿಕೆ ತಡೆಗೆ ವಿಶ್ವ ಸಮುದಾಯ ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆ ಕಡಿಮೆ ಮಾಡುವತ್ತ ಶ್ರಮಿಸ್ತಿದೆ. ಆದರೆ, ಇದರ ಜಾಗವನ್ನ ಪ್ಲಾಸ್ಟಿಕ್ ತುಂಬುತ್ತೆ ಅಂದ್ರೆ ಆಶ್ಚರ್ಯ ಎನಿಸೋಲ್ವೇ.. ಪುಣೆ ಮಹಾನಗರ ಪಾಲಿಕೆ ಪ್ಲಾಸ್ಟಿಕ್ ತ್ಯಾಜ್ಯದಿಂದ ಇಂಧನ ಉತ್ಪಾದಿಸುವ ಪರ್ಯಾಯ ತಂದಿದೆ. ಸುಮಾರು 10 ಕೆಜಿ ಪ್ಲಾಸ್ಟಿಕ್‌ನಿಂದ 6 ಲೀಟರ್ ಇಂಧನ ತಯಾರಿಸ್ಬಹುದಂತೆ.
ಪಾಲಿಕೆ ನಾರಾಯಣಪುರದಲ್ಲಿ ಇಂಧನ ಉತ್ಪಾದನಾ ಕಾರ್ಖಾನೆಗಳನ್ನು ಸ್ಥಾಪಿಸಿದೆ. ಇಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಂಸ್ಕರಣೆಯ ಪ್ರತಿ ಘಟ್ಟದಲ್ಲೂ ತಯಾರಾಗೋ ತ್ಯಾಜ್ಯದ ವಿವಿಧ ಅಂಶಗಳನ್ನು ವಿಭಿನ್ನ ಕಾರ್ಯಗಳಿಗೆ ಬಳಸಿಕೊಳ್ಳಲಾಗುತ್ತದೆ. ತ್ಯಾಜ್ಯ ದ್ರವೀಕರಿಸಿ ಜೆನರೇಟರ್, ಸ್ಟೌವ್, ಬಾಯ್ಲರ್ಗಳಿಗೆ ಇಂಧನವಾಗಿ ಬಳಸಲಾಗುತ್ತದೆ. ಸಂಸ್ಕರಣೆ ವೇಳೆ ಬಿಡುಗಡೆಯಾಗೋ ಗ್ಯಾಸ್‌ನ ಕಾರ್ಖಾನೆಯ ಯಂತ್ರಗಳನ್ನು ಚಲಾಯಿಸಲು ಬಳಸಲಾಗುತ್ತೆ. ಇನ್ನೂ ಕೊನೆಗೆ ಉಳಿಯುವ ಇದ್ದಿಲನ್ನೂ ರಸ್ತೆ ಕಾಮಗಾರಿಗೂ ಬಳಸಲಾಗುತ್ತೆ.
ಈ ಯೋಜನೆಯ ಮೂಲಕ ವಿವಿಧ ಪುರಸಭೆಯ ವಾರ್ಡ್‌ಗಳಿಂದ ಸಂಗ್ರಹಿಸಿದ ಪ್ಲಾಸ್ಟಿಕ್ ತ್ಯಾಜ್ಯವನ್ನು ವಿಲೇವಾರಿ ಮಾಡಬಹುದು. ಅಲ್ಲದೆ, ಸದ್ಯಕ್ಕೆ ಹೆಚ್ಚುತ್ತಿರುವ ಪ್ಲಾಸ್ಟಿಕ್ ಹಾವಳಿ ತಡೆಗೆ 'ಪ್ಲಾಸ್ಟಿಕ್ ಇಂಧನ ಸ್ಥಾವರಗಳು ಅತ್ಯುತ್ತಮ ಪರಿಹಾರ.