ಮಥುರಾ(ಉತ್ತರಪ್ರದೇಶ):ಬಾಳೆ ಹಣ್ಣುಗಳನ್ನು ಮಾರೋದಕ್ಕೂ ಮೊದಲು ಅವುಗಳನ್ನು ನೆಕ್ಕುತ್ತಿದ್ದ 25 ವರ್ಷದ ಹಣ್ಣುಗಳ ವ್ಯಾಪಾರಿಯನ್ನು ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಬಂಟಿ ಎಂದು ಗುರ್ತಿಸಲಾಗಿದೆ. ಬಾಳೆಹಣ್ಣುಗಳನ್ನು ಮಾರೋದಕ್ಕೆ ಮೊದಲು ಈತ ನೆಕ್ಕುತ್ತಿದ್ದ. ಈ ಗಂಭೀರ ಆರೋಪದ ಮೇಲೆ ಈತನನ್ನು ಹಿಡಿದ ಸ್ಥಳೀಯರು ಥಳಿಸಿದ್ದಾರೆ. ಈ ವೇಳೆ ಪರಾರಿಯಾಗಲು ಯತ್ನಿಸಿದ ಆತನನ್ನು ಪೊಲೀಸರ ವಶಕ್ಕೊಪಿಸಿದರು.
ಈ ಕುರಿತು ಪ್ರತಿಕ್ರಿಯಿಸಿರುವ ನಗರ ಪೊಲೀಸ್ ಆಯುಕ್ತ ಅಶೋಕ್ ಕೆ. ಮೀನಾ, ಆರೋಪಿಯನ್ನು ವೃಂದಾವನದ ಆಸ್ಪತ್ರೆಯೊಂದಕ್ಕೆ ಕೊರೊನಾ ಸೋಂಕಿನ ಪರೀಕ್ಷೆಗೆ ಕಳಿಸಲಾಗಿದ್ದು, ವರದಿ ಬರುವ ತನಕ ಕ್ವಾರಂಟೈನ್ನಲ್ಲಿ ಇಡಲಾಗುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಜೊತೆಗೆ ವಿಡಿಯೋ ಲಭ್ಯವಿದ್ದು ಕಾನೂನಾತ್ಮಕ ಕ್ರಮ ಕೈಗೊಳ್ಳೋದಾಗಿ ಭರವಸೆ ವ್ಯಕ್ತಪಡಿಸಿದ್ದಾರೆ.
ಹಿಂದಿನ ವಾರ ಮಧ್ಯಪ್ರದೇಶದಲ್ಲಿ ಮಾರುವುದಕ್ಕೆ ಮೊದಲು ಹಣ್ಣುಗಳ ಮೇಲೆ ಉಗಿಯುತ್ತಿದ್ದ ಓರ್ವನನ್ನು ಪೊಲೀಸರು ಬಂಧಿಸಿದ್ದರು.