ಲೇಹ್:ಲಡಾಖ್ನಲ್ಲಿ ಭಾರಿ ಹಿಮಪಾತ ಬಿದ್ದಿದ್ದು, ಯುವ ಜನತೆಗೆ ‘ಐಸ್ ಹಾಕಿ‘ ಕ್ರೀಡೆ ಆಡಲು ಬೇಕಾದ ವಾತಾವರಣ ಸೃಷ್ಟಿಯಾಗಿದೆ.
ಪ್ರತಿ ವರ್ಷ ಈ ಸಮಯದಲ್ಲಿ ಅನೇಕ ಕ್ರೀಡಾಪಟುಗಳು ಹಾಕಿ, ಸ್ಕೇಟಿಂಗ್ಗೆ ತೆರಳಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರು. ಆದರೆ, ಈ ಬಾರಿ ಕೊರೊನಾ ಬಿಕ್ಕಟ್ಟು ಇರುವುದರಿಂದ ಕೆಲವೇ ಮಂದಿ ಅಭ್ಯಾಸದಲ್ಲಿ ಪಾಲ್ಗೊಂಡಿದ್ದಾರೆ ಎಂದು ರಾಷ್ಟ್ರೀಯ ಆಟಗಾರ ರಿಂಚನ್ ಡೋಲ್ಮಾ ತಿಳಿಸಿದ್ದಾರೆ.
ಪ್ರತಿ ವರ್ಷ ಎರಡು ತಿಂಗಳು ನೈಸರ್ಗಿಕ ಮಂಜುಗಡ್ಡೆಯ ಮೇಲೆ ಹಾಕಿ ಹಾಗೂ ಸ್ಕೇಟಿಂಗ್ ಅಭ್ಯಾಸ ಮಾಡುತ್ತಿದ್ದೆವು. ಈ ಬಾರಿ ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಪ್ರಾಕ್ಟೀಸ್ ಮಾಡುತ್ತಿದ್ದೇವೆ ಎಂದು ಡೋಲ್ಮಾ ಹೇಳಿದ್ದಾರೆ.
ನಾವೇ ಕೃತಕವಾಗಿ ಐಸ್ ಸೃಷ್ಟಿಸಿ ಆಡುವ ಬದಲು ನೈಸರ್ಗಿಕ ಐಸ್ ಮೇಲೆ ಆಟ ಆಡುವುದು ಉತ್ತಮ. ಹಾಗಾಗಿ ನಾವಿಲ್ಲಿ ಬಂದಿದ್ದೇವೆ ಅಂತಾರೆ ಸ್ಟ್ಯಾನ್ಜಿನ್ ತ್ಸೆಕರ್.
ಕಳೆದ ದಶಕದಿಂದ ಲಡಾಖ್ನಲ್ಲಿ ಐಸ್ ಮೇಲೆ ಸ್ಕೇಟಿಂಗ್, ಹಾಕಿ ಆಡುವುದು ಒಂದು ಕ್ರೀಡೆಯಾಗಿ ಪರಿಣಮಿಸಿದೆ. ಅಲ್ಲದೇ ಇಲ್ಲಿನ ಜನ ಇದನ್ನು ಮನೋರಂಜನೆ ಕ್ರೀಡೆಯನ್ನಾಗಿ ಆನಂದಿಸುತ್ತಾರೆ.