ಕರ್ನಾಟಕ

karnataka

ETV Bharat / bharat

ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತರಲೆತ್ನಿಸಿದವರಿಗೆ ನಮ್ಮ ಯೋಧರಿಂದ ತಕ್ಕ ಶಾಸ್ತಿ: ಚೀನಾ-ಪಾಕ್​ಗೆ ಮೋದಿ ಖಡಕ್​​​ ಸಂದೇಶ

ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ದೇಶವನ್ನುದ್ದೇಶಿಸಿ ಮಾತನಾಡನಾಡಿದ ಪಿಎಂ ಮೋದಿ, ಗಡಿಯಲ್ಲಿ ಕ್ಯಾತೆ ತೆಗೆಯುತ್ತಿರುವ ನೆರೆ ರಾಷ್ಟ್ರಗಳಾದ ಚೀನಾ ಹಾಗೂ ಪಾಕಿಸ್ತಾನಕ್ಕೆ ಖಡಕ್​ ಸಂದೇಶ ನೀಡಿದ್ದಾರೆ.

PM Modi Independence Day speech
ಮೋದಿ ಸ್ವಾತಂತ್ರ್ಯೋತ್ಸವ ಭಾಷಣ

By

Published : Aug 15, 2020, 11:37 AM IST

Updated : Aug 15, 2020, 1:00 PM IST

ನವದೆಹಲಿ: ಗಡಿ ನಿಯಂತ್ರಣಾ ರೇಖೆ (LoC)ಯಿಂದ ವಾಸ್ತವಿಕ ಗಡಿ ರೇಖೆಯ (LAC)ವರೆಗೂ ನಮ್ಮ ದೇಶದ ಸಾರ್ವಭೌಮತ್ವದ ಮೇಲೆ ಕಣ್ಣಿಟ್ಟವರಿಗೆ ನಮ್ಮ ಯೋಧರು ತಕ್ಕ ಉತ್ತರ ನೀಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಕೆಂಪು ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯಿಂದ ಧ್ವಜಾರೋಹಣ

74ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ದೆಹಲಿಯ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ದೇಶವನ್ನುದ್ದೇಶಿಸಿ ಮಾತನಾಡನಾಡಿದ ಪಿಎಂ ಮೋದಿ, ಗಡಿಯಲ್ಲಿ ಕ್ಯಾತೆ ತೆಗೆಯುತ್ತಿರುವ ನೆರೆ ರಾಷ್ಟ್ರಗಳಾದ ಚೀನಾ ಹಾಗೂ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ.

ಧ್ವಜಾರೋಹಣ ಬಳಿಕ ಪಿಎಂ ಮೋದಿ ಭಾಷಣ

ಕಳೆದ ಜೂನ್‌ ತಿಂಗಳಲ್ಲಿ ಪೂರ್ವ ಲಡಾಖ್​ನ ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವಿನ ಘರ್ಷಣೆಯನ್ನು ಉಲ್ಲೇಖಿಸಿದ ಮೋದಿ, ನಮ್ಮ ಯೋಧರು ಏನು ಮಾಡಬಹುದು, ನಮ್ಮ ದೇಶ ಏನು ಮಾಡಬಹುದು ಎಂಬುದಕ್ಕೆ ಇಡೀ ಜಗತ್ತಿಗೇ ಲಡಾಖ್ ಸಾಕ್ಷಿಯಾಗಿದೆ ಎಂದರು.

ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಪಾಕಿಸ್ತಾನವು ಕದನ ವಿರಾಮ ಉಲ್ಲಂಘಿಸುತ್ತಲೇ ಇದ್ದು, ಭಾರತೀಯ ಸೇನೆ ಪ್ರತೀಕಾರ ತೀರಿಸಿಕೊಂಡಿದೆ. ನಮಗೆ ನಮ್ಮ ಸಾರ್ವಭೌಮತ್ವವೇ ಹೆಚ್ಚು. ಭಾರತವು ಒಗ್ಗೂಡಿ ತನ್ನ ಸಾರ್ವಭೌಮತ್ವವನ್ನು ರಕ್ಷಿಸುತ್ತದೆ. ಇದಕ್ಕೆ ಧಕ್ಕೆ ಉಂಟು ಮಾಡುವವರನ್ನು ನಮ್ಮ ಯೋಧರು ಸುಮ್ಮನೆ ಬಿಡುವುದಿಲ್ಲ ಎಂದು ಪ್ರಧಾನಿ ಎಚ್ಚರಿಕೆ ನೀಡಿದ್ದಾರೆ.

Last Updated : Aug 15, 2020, 1:00 PM IST

ABOUT THE AUTHOR

...view details