ನವದೆಹಲಿ:ಅಭಿವೃದ್ಧಿ ಹೆಸರಿನಲ್ಲಿ ಅಪಾರ ಅರಣ್ಯ ಸಂಪತ್ತು ನಾಶವಾಗುತ್ತಿದೆ ಎಂದು ಪರಿಸರವಾದಿಗಳು ಕಳವಳ ವ್ಯಕ್ತಪಡಿಸುತ್ತಲೇ ಇದ್ದಾರೆ. ಆದ್ರೆ, ಖುಷಿಯ ವಿಚಾರ ಏನು ಗೊತ್ತೇ? ಕಳೆದ 5 ವರ್ಷದಲ್ಲಿ ಭಾರತದಲ್ಲಿ ಅರಣ್ಯ ಸಂಪತ್ತು ಹೆಚ್ಚಳ ಆಗಿದೆಯಂತೆ. ಈ ವಿಚಾರವನ್ನು ಸ್ವತ: ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ.
ಕಳೆದ 5 ವರ್ಷಗಳಿಂದ ಭಾರತದಲ್ಲಿ ಅರಣ್ಯ ಸಂಪತ್ತು ಹೆಚ್ಚಾಗುತ್ತಿದೆ ಎಂದು ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವ್ಡೇಕರ್ ಹರ್ಷ ವ್ಯಕ್ತಪಡಿಸಿದ್ದಾರೆ. 2015 ರಿಂದ 2017ರಲ್ಲಿ 8000 ಸಾವಿರ ಚದರ ಕಿಲೋಮೀಟರ್ ಅರಣ್ಯ ಸಂಪತ್ತು ವೃದ್ದಿಸಿದೆ.