ಕರ್ನಾಟಕ

karnataka

ETV Bharat / bharat

ಹುಟ್ಟುಹಬ್ಬವೇ ಮಸಣಕ್ಕೆ ದಾರಿ: ಸ್ನೇಹದ ಹೆಸರಲ್ಲಿ ಯುವಕನಿಗಿಟ್ಟರು ಮುಹೂರ್ತ - ಹುಟ್ಟುಹಬ್ಬದಂದೇ ಯುವಕನ ಹತ್ಯೆ

ಯುವಕನಿಗೊಬ್ಬನಿಗೆ ಹುಟ್ಟುಹಬ್ಬವೇ ಮಸಣಕ್ಕೆ ದಾರಿಯಾಗಿದೆ. ತನ್ನ 27ನೇ ವರ್ಷದ ಹುಟ್ಟುಹಬ್ಬದ ಆಚರಣೆ ವೇಳೆ ಸ್ನೇಹಿತರೇ ಆತನನ್ನು ಮಾರಕಾಸ್ತ್ರಗಳಿಂದ ಹತ್ಯೆಗೈದಿದ್ದಾರೆ.

ಮುಂಬೈನಲ್ಲಿ 27 ವರ್ಷದ ಯುವಕನ ಸಾವು

By

Published : Jul 29, 2019, 8:52 AM IST


ಮುಂಬೈ: ಹುಟ್ಟುಹಬ್ಬ ಆಚರಣೆಯೇ ಯುವಕನ ಪ್ರಾಣ ತೆಗೆದ ಘಟನೆ ವಾಣಿಜ್ಯ ನಗರಿ ಮುಂಬೈನಲ್ಲಿ ನಡೆದಿದೆ. ಸ್ನೇಹತದ ಹೆಸರಲ್ಲಿ ಮುಹೂರ್ತ ಇಟ್ಟಿದ್ದ ಆತನ ಫ್ರೆಂಡ್ಸ್​ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದಿದ್ದಾರೆ.

ಭಾನುವಾರದ ತಡರಾತ್ರಿ 27 ವರ್ಷದ ಯುವಕ ನಿತೀಶ್​ ಸಾವಂತ್​ನನ್ನು ಅವನ ಹುಟ್ಟುಹಬ್ಬ ಆಚರಣೆ ಸಂದರ್ಭದಲ್ಲೇ ಆತನ ಸ್ನೇಹಿತರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದಿದ್ದಾರೆ.

ಮುಂಬೈನಲ್ಲಿ 27 ವರ್ಷದ ಯುವಕನ ಸಾವು

ಈ ಘಟನೆ ಘಾಟ್ಕೋಪರ್ ಪ್ರದೇಶದಿಂದ ವರದಿಯಾಗಿದೆ. ಕೆಲವು ದಿನಗಳ ಹಿಂದೆ ಇವರ ಮಧ್ಯೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿದ್ದರ ಪರಿಣಾಮವಾಗಿಯೇ ಆತನ ಮೇಲೆ ಸುಮಾರು 8 ಜನರು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಕೆಲವು ಸ್ನೇಹಿತರೊಂದಿಗೆ ವಾಗ್ವಾದ ನಡೆಸಿದ್ದಾನೆ, ತದನಂದರ ಪರಿಸ್ಥಿತಿ ವಿಕೋಪಕ್ಕೆ ತಲುಪಿದ್ದು, 7-8 ಜನರು ಸೇರಿ ಈತನನ್ನು ಕೊಲೆ ಮಾಡಿದ್ದಾರೆ. ಮೃತ ವ್ಯಕ್ತಿ ಸುಮಾರು 4-5 ದಿನಗಳ ಹಿಂದೆ ಕೆಲವು ವ್ಯಕ್ತಿಗಳ ಜೊತೆ ಗಲಾಟೆ ಮಾಡಿದ್ದಾನೆ ಎಂದು ಘಟನೆಯ ಕುರಿತು ಪೊಲೀಸ್ ಅಧಿಕಾರಿ ಪ್ರತಾಪ್ ಬೋಸ್ಲೇ ಪ್ರತಿಕ್ರಿಯಿಸಿದ್ದಾರೆ.

ಮೃತ ವ್ಯಕ್ತಿ ಸುಮಾರು 4-5 ದಿನಗಳ ಹಿಂದೆಯೇ ತನ್ನ ಸ್ನೇಹಿತರೊಂದಿಗೆ ವಾಗ್ವಾದ ನಡೆಸಿದ್ದರ ಪರಿಣಾಮವಾಗಿ ಆತನನ್ನು ಕೊಲ್ಲಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.ಈ ಘಟನೆಯ ಕುರಿತು ಪ್ರಕರಣ ದಾಖಲಿಸಲಾಗಿದೆ.

ABOUT THE AUTHOR

...view details