ನವದೆಹಲಿ:ಆರೋಗ್ಯ ಸೇತು ಆ್ಯಪ್ ಭದ್ರತಾ ಉಲ್ಲಂಘನೆಗೆ ಗುರಿಯಾಗಿದೆ. ಆದರೆ ಭಾರತದ ಸರ್ಕಾರ ಇದನ್ನು ನಿರಾಕರಿಸಿದೆ ಎಂದು ಫ್ರೆಂಚ್ ಹ್ಯಾಕರ್ ಎಲಿಯಟ್ ಆಲ್ಡರ್ಸನ್ ಹೇಳಿದ್ದಾರೆ.
ಆದರೆ ಮಾಹಿತಿ ಹಾಗೂ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಮತ್ತು ಆರೋಗ್ಯ ಸೇತು ತಂಡವು ಅಪ್ಲಿಕೇಶನ್‌ನಲ್ಲಿ ಭದ್ರತಾ ಸಮಸ್ಯೆಗಳಿಲ್ಲ ಎಂದು ಹೇಳಿದ ಬಳಿಕ ಫ್ರೆಂಚ್ ಹ್ಯಾಕರ್ ಈ ರೀತಿಯಾಗಿ ಹೇಳಿಕೆ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಆರೋಗ್ಯ ಸೇತು ಅಪ್ಲಿಕೇಶನ್‌ನಲ್ಲಿ ಭದ್ರತಾ ಸಮಸ್ಯೆ ಇದೆ ಎಂದು ನಾನು ಹೇಳಿದ ಬಳಿಕ ಆ ಸಮಸ್ಯೆಯನ್ನು ಪರಿಹರಿಸಲಾಗಿದೆ ಎಂದು ಎಲಿಯಟ್ ಆಲ್ಡರ್ಸನ್ ಹೇಳಿಕೊಂಡಿದ್ದರು.
ಈ ಕುರಿತು ಟ್ವೀಟ್ ಮಾಡಿರುವ ಆಲ್ಡರ್ಸನ್ ಈ ರೀತಿಯಾಗಿ ಹೇಳಿದ್ದಾರೆ:
- ಅಪ್ಲಿಕೇಶನ್‌ನ ಹಿಂದಿನ ಆವೃತ್ತಿಯಲ್ಲಿ, ಸೈಬರ್ ಅಟ್ಯಾಕರ್ಸ್ ಅಪ್ಲಿಕೇಶನ್‌ನ ಯಾವುದೇ ಆಂತರಿಕ ಫೈಲ್‌ನ ವಿಷಯವನ್ನು ಪಡೆಯಲು ಸಾಧ್ಯವಾಗುತ್ತಿತ್ತು. ಇದು ಸ್ಥಳೀಯ ಡೇಟಾಬೇಸ್ಗಳನ್ನು ಒಳಗೊಂಡಿದೆ.
- ಸೋಂಕಿತ, ಅನಾರೋಗ್ಯ ಪಿಡಿತ ಮತ್ತು ಸ್ವಯಂ-ಮೌಲ್ಯಮಾಪನ ಮಾಡಿದವರ ಕುರಿತು ತಿಳಿಯಲು ಸಾಧ್ಯವಾಗುತ್ತಿತ್ತು.
- ಪಿಎಂಒ ಕಚೇರಿಯಲ್ಲಿ ಅಥವಾ ಭಾರತೀಯ ಸಂಸತ್ತಿನಲ್ಲಿ ಯಾರಾದರೂ ಅನಾರೋಗ್ಯದಿಂದ ಬಳಲುತ್ತಿದ್ದಾರೆಯೇ ಎಂದು ನಾನು ನೋಡಲು ಸಾಧ್ಯವಾಯಿತು. ನಿರ್ದಿಷ್ಟ ಮನೆಯಲ್ಲಿ ಯಾರಾದರೂ ಅನಾರೋಗ್ಯದಿಂದ ಬಳಲುತ್ತಿದ್ದಾರೆಯೇ ಎಂದು ಕೂಡಾ ನೋಡಲು ನನಗೆ ಸಾಧ್ಯವಾಯಿತು.
ನಿನ್ನೆಯ ಮಾಹಿತಿಯ ಪ್ರಕಾರ ಪಿಎಂಒ ಕಚೇರಿಯಲ್ಲಿ 5 ಜನರು ಅನಾರೋಗ್ಯ ಪೀಡಿತರು, ಭಾರತೀಯ ಸೇನಾ ಪ್ರಧಾನ ಕಚೇರಿಯಲ್ಲಿ 2 ಅನಾರೋಗ್ಯವಂತರು, ಭಾರತೀಯ ಸಂಸತ್ತಿನಲ್ಲಿ 1 ಸೋಂಕಿತ ಪ್ರಕರಣ ಮತ್ತು ಗೃಹ ಕಚೇರಿಯಲ್ಲಿ 3 ಸೋಂಕಿತರು ಇದ್ದಾರೆಂದು ನನಗೆ ಆ್ಯಪ್ ತೊರಿಸುತ್ತಿತ್ತು ಎಂದು ಆಲ್ಡರ್ಸನ್ ಟ್ವೀಟ್ ನಲ್ಲಿ ಹಂಚಿಕೊಂಡಿದ್ದಾರೆ.
ಕಾಂಗ್ರೆಸ್ನಿಂದಲೂ ವ್ಯಕ್ತವಾಗಿತ್ತು ಆಕ್ಷೇಪ
ಇನ್ನು ಈ ಸಂಬಂಧ ಕಾಂಗ್ರೆಸ್ ವಕ್ತಾರರು ಆ್ಯಪ್ ಬಗ್ಗೆ ಆಕ್ಷೇಪ ಎತ್ತಿದ್ದರು. ತಜ್ಞರು ಆರೋಗ್ಯ ಸೇತು ಆ್ಯಪ್ನಲ್ಲಿ ಸಮಸ್ಯೆ ಇರುವುದಾಗಿ ಹೇಳಿದ್ದಾರೆ ಎಂದು ಸುದ್ದಿಗೋಷ್ಠಿ ನಡೆಸಿ ಟೀಕೆ ಮಾಡಿದ್ದರು. ಈ ಆರೋಪವನ್ನ ಸರ್ಕಾರ ತಳ್ಳಿ ಹಾಕಿತ್ತು. ಇದೇ ವೇಳೆ ರಾಹುಲ್ ಗಾಂಧಿ ಟ್ವೀಟ್ ಮಾಡಿ ಆರೋಗ್ಯ ಸೇತು ಆ್ಯಪ್ ಜನರ ಮಾಹಿತಿ ಕದಿಯುವುದಿಲ್ಲ ಎಂದು ಸ್ಪಷ್ಟನೆಯ ಟ್ವೀಟ್ ಮಾಡಿದ್ದರು.