ನೋಯ್ಡಾ (ಉತ್ತರ ಪ್ರದೇಶ): ವಿಶ್ವ ಮಹಿಳಾ ದಿನಕ್ಕಾಗಿ ಉತ್ತರ ಪ್ರದೇಶ ಸರ್ಕಾರ ಮಹಿಳೆಯರಿಗೆ ವಿಶೇಷ ಕೊಡುಗೆ ನೀಡಿದೆ. ಇಲ್ಲಿನ ನೋಯ್ಡಾ ಮೆಟ್ರೋ ನಿಲ್ದಾಣಗಳಲ್ಲಿ ಇನ್ನುಮುಂದೆ ಮಹಿಳೆಯರಿಗೆ ಅವಶ್ಯಕವಾದ ಸ್ಯಾನಿಟರಿ ಪ್ಯಾಡ್ಗಳು ಉಚಿತವಾಗಿ ಲಭ್ಯವಾಗಲಿವೆ. ಮಾರ್ಚ್ 8 ರಿಂದ ಗ್ರೇಟರ್ ನೋಯ್ಡಾ ಮೆಟ್ರೋದ ಎಲ್ಲಾ 21 ನಿಲ್ದಾಣಗಳಲ್ಲಿ ಈ ಸೌಲಭ್ಯ ಸಿಗಲಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ವಿಶ್ವ ಮಹಿಳಾ ದಿನಕ್ಕೆ ಉಡುಗೊರೆ: ಈ ಮೆಟ್ರೋ ನಿಲ್ದಾಣಗಳಲ್ಲಿ ಉಚಿತ ಸ್ಯಾನಿಟರಿ ಪ್ಯಾಡ್ಗಳು ಲಭ್ಯ
ಇಲ್ಲಿನ ನೋಯ್ಡಾ ಮೆಟ್ರೋ ನಿಲ್ದಾಣದ ಮೆಟ್ರೋ ನಿಲ್ದಾಣಗಳಲ್ಲಿ ಇನ್ನುಮುಂದೆ ಮಹಿಳೆಯರಿಗೆ ಅವಶ್ಯಕವಾದ ಸ್ಯಾನಿಟರಿ ಪ್ಯಾಡ್ಗಳು ಉಚಿತವಾಗಿ ಲಭ್ಯವಾಗಲಿವೆ. ಮಾರ್ಚ್ 8 ರಿಂದ ಗ್ರೇಟರ್ ನೋಯ್ಡಾ ಮೆಟ್ರೋದ ಎಲ್ಲಾ 21 ನಿಲ್ದಾಣಗಳಲ್ಲಿ ಈ ಸೌಲಭ್ಯ ಸಿಗಲಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಮೇಕಪ್ ರೂಂ ಸೇರಿದಂತೆ, ಗುಲಾಬಿ ಕೇಂದ್ರಗಳಲ್ಲಿ ಫೀಡಿಂಗ್ ರೂಂ, ಡೈಪರ್ ಬದಲಿಸುವ ಸೌಲಭ್ಯ, ವ್ಯಾನಿಟಿ ಮತ್ತು ಚೇಂಜಿಂಗ್ ರೂಂ ಸಹ ಲಭ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೆಟ್ರೋ ನಿಲ್ದಾಣದಲ್ಲಿ ಪಿಂಕ್ ಸ್ಟೇಷನ್ಗಳನ್ನೂ ನಿರ್ಮಾಣ ಮಾಡಲಾಗಿದ್ದು, ಅಲ್ಲಿ ಮಹಿಳೆಯರನ್ನು ನೇಮಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ನೋಯ್ಡಾದ ಸೆಕ್ಟರ್ 76ನ ಎರಡು ಸ್ಟೇಷನ್ಗಳಲ್ಲಿ ಸಂಪೂರ್ಣ ಮಹಿಳಾ ಸಿಬ್ಬಂದಿಯನ್ನು ಹೊಂದುವ ಗುರಿ ಹೊಂದಲಾಗಿದೆ. ಭದ್ರತಾ ಸಿಬ್ಬಂದಿಯನ್ನು ಹೊರತುಪಡಿಸಿ, ಖಾಸಗಿ ಸಂಸ್ಥೆಗೆ ಹೊರಗುತ್ತಿಗೆ ನೀಡುವ ಕೆಲಸ, ಇತರ ಎಲ್ಲ ಸಿಬ್ಬಂದಿ ಈ ನಿಲ್ದಾಣಗಳಲ್ಲಿ ಸ್ತ್ರೀಯರಾಗಿರುತ್ತಾರೆ ಎಂದು ಅಧಿಕಾರಿ ಹೇಳಿದರು.