ಕರ್ನಾಟಕ

karnataka

ETV Bharat / bharat

8 ಕೋಟಿ ವಲಸಿಗರಲ್ಲಿ ಕೇವಲ 20.26 ಲಕ್ಷ ಜನರಿಗೆ ಮಾತ್ರ ತಲುಪಿದ ಆಹಾರ ಧಾನ್ಯ! - 8 ಕೋಟಿ ವಲಸಿಗರು

ಕೋವಿಡ್-19 ಲಾಕ್‌ಡೌನ್‌ನಿಂದಾಗಿ ಹಸಿವಿನಿಂದ ಬಳಲುತ್ತಿರುವ 8 ಕೋಟಿ ವಲಸಿಗರಿಗೆ ಕೇಂದ್ರ ಸರ್ಕಾರವು ಉಚಿತ ಆಹಾರ ಧಾನ್ಯಗಳನ್ನು ನೀಡಬೇಕು ಎಂದು ಘೋಷಿಸಿತ್ತು. ಆದರೆ, ಕೇವಲ 20.36 ಲಕ್ಷ ವಲಸೆ ಕಾರ್ಮಿಕರಿಗೆ ಮಾತ್ರ ಉಚಿತ ಆಹಾರ ಧಾನ್ಯಗಳನ್ನು ಪೂರೈಸಲಾಗಿದೆ.

migrant
migrant

By

Published : Jun 8, 2020, 11:04 AM IST

ನವದೆಹಲಿ: ಕೇಂದ್ರ ಅಥವಾ ರಾಜ್ಯ ಪಡಿತರ ಚೀಟಿ ಹೊಂದಿಲ್ಲದ 8 ಕೋಟಿ ವಲಸಿಗರಲ್ಲಿ ಕೇವಲ 20.36 ಲಕ್ಷ ವಲಸೆ ಕಾರ್ಮಿಕರಿಗೆ ಮಾತ್ರ ಉಚಿತ ಆಹಾರ ಧಾನ್ಯಗಳನ್ನು ಪೂರೈಸಲಾಗಿದೆ ಎಂದು ಕೇಂದ್ರ ಆಹಾರ ಸಚಿವಾಲಯ ತಿಳಿಸಿದೆ.

ಕೋವಿಡ್-19 ಲಾಕ್‌ಡೌನ್‌ನಿಂದಾಗಿ ಹಸಿವಿನಿಂದ ಬಳಲುತ್ತಿರುವ 8 ಕೋಟಿ ವಲಸಿಗರಿಗೆ ಕೇಂದ್ರ ಸರ್ಕಾರವು ಪ್ರತಿ ವ್ಯಕ್ತಿಗೆ 5 ಕೆ.ಜಿ ಉಚಿತ ಆಹಾರ ಧಾನ್ಯಗಳನ್ನು ಎರಡು ತಿಂಗಳವರೆಗೆ ನೀಡಬೇಕು ಎಂದು ಮೇ 14ರಂದು ಘೋಷಿಸಿತ್ತು.

ಕೇಂದ್ರ ಅಥವಾ ರಾಜ್ಯ ಪಡಿತರ ಚೀಟಿ ಇಲ್ಲದವರಿಗೆ ಉಚಿತ ಆಹಾರವನ್ನು ವಿತರಿಸಬೇಕು ಎಂದು ಆದೇಶಿಸಿತ್ತು. ಆದರೆ, ಇಲ್ಲಿ ಯವರೆಗೆ ಆ ಗುರಿ ತಲುಪಲು ಸಾಧ್ಯವಾಗಿಲ್ಲ.

"ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 4.42 ಲಕ್ಷ ಟನ್ ಆಹಾರ ಧಾನ್ಯಗಳನ್ನು ಪಡೆದುಕೊಂಡಿದ್ದು, 10,131 ಟನ್ ಆಹಾರ ಧಾನ್ಯಗಳನ್ನು 20.26 ಲಕ್ಷ ಫಲಾನುಭವಿಗಳಿಗೆ ವಿತರಿಸಿದೆ" ಎಂದು ಕೇಂದ್ರ ಆಹಾರ ಸಚಿವಾಲಯವು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ABOUT THE AUTHOR

...view details