ನವದೆಹಲಿ:ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಡೆಸುತ್ತಿರುವ ಸುದ್ದಿಗೋಷ್ಠಿಯಲ್ಲಿ ವಲಸೆ ಕಾರ್ಮಿಕರಿಗೆ ಭರ್ಜರಿ ಗಿಫ್ಟ್ ನೀಡಿದ್ದು, ಬರೋಬ್ಬರಿ 8 ಕೋಟಿ ವಲಸೆ ಕಾರ್ಮಿಕರಿಗೆ ಮುಂದಿನ ಎರಡು ತಿಂಗಳ ಉಚಿತ ಊಟ ನೀಡಲು ತೀರ್ಮಾನ ಮಾಡಲಾಗಿದೆ.
ಪ್ರತಿ ವಲಸೆ ಕಾರ್ಮಿಕರಿಗೆ 5 ಕೆ.ಜಿ ಅಕ್ಕಿ, 5 ಕೆಜಿ ಗೋಧಿ ಹಾಗೂ 1 ಕೆ.ಜಿ ಬೇಳೆ ವಿತರಣೆ ಮಾಡಲು ನಿರ್ಧರಿಸಲಾಗಿದ್ದು, ಕಾರ್ಡ್ ಇಲ್ಲದವರಿಗೆ 5 ಕೆಜಿ ಅಕ್ಕಿ, ಗೋಧಿ ಹಾಗೂ 1 ಕೆ.ಜಿ ಬೇಳೆ ನೀಡುತ್ತೇವೆ ಎಂದಿದ್ದಾರೆ. ಅವರು ದೇಶದ ಯಾವುದೇ ಮೂಲೆಯಲ್ಲೂ ಪಡಿತರ ಪಡೆಯಬಹುದು ಎಂದಿದ್ದಾರೆ. ಇದಕ್ಕಾಗಿ 3.500 ಕೋಟಿ ರೂ ಖರ್ಚು ಮಾಡುತ್ತೇವೆ ಎಂದು ಘೋಷಿಸಿದ್ದಾರೆ. ಒನ್ ನೇಷನ್ ಒನ್ ರೇಷನ್ ಕಾರ್ಡ್ ಜಾರಿಯಲ್ಲಿದೆ ಎಂದಿದ್ದಾರೆ.
ಉಳಿದಂತೆ 14.62 ಲಕ್ಷ ಮಾನವ ಕೆಲಸ ಸೃಷ್ಟಿ ಮಾಡಲಾಗಿದ್ದು, ನರೇಗಾದಲ್ಲಿ 14.62 ಲಕ್ಷ ಮಾನವ ಕೆಲಸದ ದಿನಗಳನ್ನು ಸೃಷ್ಟಿಸಿದ್ದೇವೆ. 2.33 ಲಕ್ಷ ಮಂದಿ ಕೆಲಸಗಾರರಿಗೆ ಮನ್ರೇಗಾದಲ್ಲಿ ಕೆಲಸ ನೀಡಲಾಗುವುದು ಎಂದು ತಿಳಿಸಿದ್ದು, 1.87 ಗ್ರಾಮ ಪಂಚಾಯಿತಿಗಳಲ್ಲಿ ಮನರೇಗಾ ಕೆಲಸ ನೀಡಲು ನಿರ್ಧರಿಸಲಾಗಿದ್ದು, ಕೂಲಿಯನ್ನು 182 ರೂ.ರಿಂದ 202 ರೂ.ಗೆ ಹೆಚ್ಚಿಸಿದ್ದೇವೆ. ಮನರೇಗಾಗೆ 10 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಲು ಕೇಂದ್ರ ನಿರ್ಧಾರ ಕೈಗೊಂಡಿದೆ ಎಂದು ಘೋಷಿಸಿದರು.