ಕರ್ನಾಟಕ

karnataka

ETV Bharat / bharat

ಹೈದರಾಬಾದ್​ನಲ್ಲಿ ಜ.11ರಿಂದ ಉಚಿತ ಕುಡಿಯುವ ನೀರು ಪೂರೈಕೆ ಯೋಜನೆಗೆ ಚಾಲನೆ - 20 ಸಾವಿರ ಲೀಟರ್​​ ಕುಡಿಯುವ ನೀರು ಪೂರೈಕೆ

ಗ್ರೇಟರ್ ಹೈದರಾಬಾದ್ ಮುನ್ಸಿಪಲ್​ ಚುನಾವಣೆ ವೇಳೆ ನೀಡಿರುವ ಭರವಸೆಯಂತೆ ನಗರದ ಜನತೆಗೆ ಇಲ್ಲಿನ ಸರ್ಕಾರ ಉಚಿತವಾಗಿ ನೀರು ಪೂರೈಕೆ ಮಾಡಲು ಮುಂದಾಗಿದೆ.

Minister KTR
Minister KTR

By

Published : Jan 8, 2021, 7:03 PM IST

ಹೈದರಾಬಾದ್​: ಗ್ರೇಟರ್‌ ಹೈದರಾಬಾದ್‌ ‌ಮಹಾನಗರ ಪಾಲಿಕೆ ಚುನಾವಣೆ ವೇಳೆ ಟಿಆರ್​ಎಸ್​ ಪ್ರಣಾಳಿಕೆಯಲ್ಲಿ ತಿಳಿಸಿದ ಹಾಗೇ ನಗರದ ಜನತೆಗೆ ಉಚಿತವಾಗಿ ಕುಡಿಯುವ ನೀರು ಪೂರೈಕೆ ಮಾಡಲು ಮುಂದಾಗಿದೆ.

ಪ್ರತಿ ತಿಂಗಳಿಗೆ ಉಚಿತವಾಗಿ 20 ಸಾವಿರ ಲೀಟರ್​​ ಕುಡಿಯುವ ನೀರು ಪೂರೈಕೆ ಮಾಡುವುದಾಗಿ ಟಿಆರ್​ಎಸ್ ಭರವಸೆ ನೀಡಿತ್ತು. ಚುನಾವಣೆ ಪ್ರಣಾಳಿಕೆ ಪ್ರಕಾರ ಜನವರಿ 11ರಂದು ತೆಲಂಗಾಣ ಪುರಸಭೆ ಸಚಿವ ಕೆ.ಟಿ ರಾಮ್​​ರಾವ್​​​​ ಈ ಯೋಜನೆಗೆ ಯೂಸೂಫ್​ಗೂಡಾದಲ್ಲಿ ಚಾಲನೆ ನೀಡಲಿದ್ದಾರೆ.

ಗ್ರೇಟರ್​ ಹೈದರಾಬಾದ್​ ಚುನಾವಣೆ ವೇಳೆ ಮಾತನಾಡಿದ್ದ ಕೆಸಿಆರ್​, ನಗರದ ಜನರು ಡಿಸೆಂಬರ್​ ತಿಂಗಳ ನೀರಿನ ಬಿಲ್​ ಪಾವತಿ ಮಾಡುವ ಅವಶ್ಯಕತೆ ಇಲ್ಲ. ಅದು ಜನವರಿ ತಿಂಗಳ ಬಿಲ್​ನಲ್ಲಿ ಸೇರಿಕೊಳ್ಳಲಿದೆ ಎಂದು ಹೇಳಿದ್ದರು. ಡಿಸೆಂಬರ್​ 1ರಂದು ಹೈದರಾಬಾದ್​ನ ಮಹಾನಗರ ಪಾಲಿಕೆ ಚುನಾವಣೆ ನಡೆದು, ಡಿಸೆಂಬರ್​ 4ರಂದು ಫಲಿತಾಂಶ ಪ್ರಕಟಗೊಂಡಿತು. ಇದರಲ್ಲಿ ಟಿಆರ್​ಎಸ್​ ಅತಿ ಹೆಚ್ಚು ಸ್ಥಾನಗಳಲ್ಲಿ ಗೆಲುವು ದಾಖಲೆ ಮಾಡಿದೆ.

ABOUT THE AUTHOR

...view details